ಅನುಭವವಿದೇ ನೋಡಿ ಆನಂದೋ ಬ್ರಹ್ಮ
ಏನೆಂದ್ಹೇಳಲಿನ್ನಾಗುವ ಸಂಭ್ರಮ ಧ್ರುವ
ಸುಖ ನೋಡಿ ನಮ್ಮ ಸ್ವಾನುಭವದ
ಸಖರಿಂದ ಮೀರಿ ಬಲು ಸುಸ್ವಾದ
ಅಖರಿಂದ ಕೇಳಿ ನಿಜ ಬೋಧಾ
ಶುಕಮುನಿ ಸೇವಿಸುದಾ 1
ಬೆರೆದು ನೋಡಿ ಆರು ಚಕ್ರವೇರಿ
ಸುರಿಯುತಿದೆ ಸುಖ ಸಂತ್ರಾಧಾರಿ
ಭೋರ್ಗರೆಯುತಿದೆ ಅನಂತ ಪರಿ-
ದೋರಿ ಕೊಡುತಾನೆ ಶ್ರೀಹರಿ 2
ಸುಗ್ಗಿ ಇದೇ ನೋಡಿ ಸುಜ್ಞಾನಿಗಳು
ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ
ಬೊಗ್ಗಿ ಉಣಬೇಕು ಇದು ಸರ್ವಕಾಲ
ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ 3