ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಾರೆ ಕಂಡೆವಯ್ಯಾ ಕಣ್ಣಾರೆ ನಾ ಧ್ರುವ ಕಣ್ಣಾರೆ ಕಂಡೆ ಹರಿಯ ಎನ್ನ ಪ್ರಾಣಧೊರಿಯ ಧನ್ಯಗೈಸಿದ ಪರಿಯ ಏನೆಂದ್ಹೇಳಲಯ್ಯ 1 ಸ್ವಾನುಭವದ ಖೂನ ಜನಕ್ಹೇಳಲೇನು 2 ಆಡೇನಂದರ ಅಮಾತು ನಾಡಿಗೇನು ತಿಳದೀತು ಪಡೆದವಗೆ ದೋರಿತು ಬಿಡದ್ಹಾಂಗಾದೀತು 3 ಗುರುಕರುಣ ಕಟಾಕ್ಷ ಗುರುತಾಗ್ಯದ್ಯನ್ನಪೇಕ್ಷಾ ಇರುಳ್ಹಗಲೆ ದೋರುವದಧ್ಯಕ್ಷ 4 ಎನಗದೆ ಬ್ರಹ್ಮಾನಂದ ಭಾನುಕೋಟಿ ತೇಜನಿಂದ ದೀನಮಹಿಪತಿ ಬಂದ ಅನುಭವ ಆನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಧ್ರುವ ಏನೆಂದ್ಹೇಳಲಯ್ಯ ನೀವು ಮಾಡಿದುಪಕಾರ ನಾನೇನುತ್ತೀರ್ಣಾದೇನು ಹೀನ ದೀನ ಕಿಂಕರ ನೀನೆ ತ್ರಿಭುವನಕೆಲ್ಲ ಸುಖವಿಡುದಾರ ಮುನಿಜನರ ಮಂದಾರ ಘನ ಸಹಕಾರ 1 ಉಪಕಾರಕ ನೀ ಬಂದ್ಯೊ ಉಪಮೆರಹಿತ ಉಪಾಯವದೋರಲಿಕ್ಕೆ ಕೃಪೆಯುಳ್ಳ ಸಮರ್ಥ ತಾಪತ್ರಯ ಹರಿಸುವ ಶಕ್ತ ನೀನೆ ಶ್ರೀನಾಥ ಈ ಪರಿಮಾಡುವರಿಲ್ಲ ಆಪ ನೀನೆ ಅನಂತ 2 ಸಕಳಕೆ ಸಿಲುಕದ ಸುಖ ನೀಡಿದೆ ಅಯ್ಯ ನೀ ಅಕಳಂಕ ನಿಜರೂಪ ಪ್ರಕಟಿಸಿದ ಅಯ್ಯ ಸುಕಾಲ ಸುಭಿಕ್ಷದಿಂದ ಮಾಡಿದ್ಯೋ ನೀ ದಯ ಅಖಿಳದೊಳು ಮಹಿಪತಿಯ ಪಿಡಿದ್ಯೊ ನೀ ಕೈಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಸುಖ ನೋಡಿ ಸದ್ಗುರು ಕೃಪೆಯಿಂದ ವಿಶ್ವತೋಮುಖ ತೋರುವ ತಾಂ ಗೋವಿಂದ ಧ್ರುವ ಏನೆಂದ್ಹೇಳಲಯ್ಯ ಅನುಭವದ ಮಾತು ಖೂನಾಗ್ಯಾದೊಂದೇ ಶಾಶ್ವತ ಆನಂದೋಭರಿತ ಸ್ವಾನಂದ ಸುಖ ತಾನೆ ಆಗ್ಯದೆ ಸನ್ಮತ ಘನಬೆರೆದು ನೋಡುವದೀ ಸುಪಥ 1 ಮಲಕಿನ ಮನುಜರು ಮನವಿಡಬಲ್ಲರೇ ನಾಲ್ಕು ವೇದ ಸಾರುದಕ ಒಮ್ಮೆಯಾದರ ನಿಲುಕಿಸಿ ನಿಜ ನೋಡಿದರಸಾಧ್ಯ ಬೆಳಕೆ ಆಗ್ಯದ ನೋಡಿ ತಿಳಿಕೊಂಡರೆ 2 ಗುರುವಿನಿಂದಧಿಕಿಲ್ಲ ಅರಿತುಕೊಳ್ಳಿರೊ ಖೂನ ಪರಮಗತಿಯ ಸಾಧನ ಸುತತ್ವ ಜ್ಞಾನ ಬೆರೆದು ಮಹಿಪತಿ ಪೂರ್ಣ ಸದ್ಗುರು ಚರಣಕೆರಗಿ ಮನ ಪಡೆವದೀ ದಯಕರುಣಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು