ಅಧ್ಯಾಯ :ನಾಲ್ಕು
ಪದ್ಯ
ಮುಂದೆ ತ್ರೇತಾಯುಗವು ಬಂದಂಥ ಕಾಲದಲಿ ಇಂದಿರೇಶನು
ರಾಮಯೆಂದು ದಶರಥನಲ್ಲಿ ಕಂದನಾಗ್ಯವತರಿಸಿ ತಂದೆ
ಆಜ್ಞದಿ ಸೀತೆಯಿಂದ ಲಕ್ಷ್ಮಣನಿಂದ ಚಂದಾಗಿ ಬಡಗೂಡಿ
ವನ ಚರಿಸಿ ಬಂದ ಯಮುನಾದ್ರಿಯಲಿ ನೊಂದು ನೀರಡಿಸಿ
ತನ್ನ ಬಾಣದಿಂದ ಭೇದಿಸಿದಾ|| 1
ತಡವು ಇಲ್ಲದೆ ಭೂಮಿ ಒಡೆದು ಬಂದಿತು ಆಗ ಕಡು
ಭೋಗವತಿ ನಾರಿಯು ಗುಡದಂಥ ಸವಿನೀರು ಕುಡಿದು
ನರನಂತೆ ದೃಢನಿದ್ರೆಗೊಂಡ ಜಗದೊಡೆಯ ರಾಘವನು||
ದೃಢವಾಗಿ ಬಹುಕಾಲ ಬಿಡದೆ ಅಲ್ಲಿರುವ ಆ ಮೃಡನ ರಾಣಿಯು
ತಾನು ನಡೆದು ಬಂದಳು ಅಲ್ಲೇ ಶರಗರಾದಿ ಕೈಯಲ್ಲಿ
ಹಿಡಿದು, ಆರತಿಯನ್ನು ದೃಢಭಕುತ ಲಕ್ಷಣನು ದೃಢ
ನಿದ್ರಿಗೊಂಡಂಥ ಒಡಿಯಗೆಚ್ಚರ ಮಾಡಗೊಡದೆ ಆಕೆಯ
ಕಂಡು ನುಡಿದನೀಪರಿಯ||
ಪದ ರಾಗ:ಭೈರವಿ ಅಟತಾಳ ಸ್ವರ ಋಷಭ
ದಾವಾಕಿ ಪೇಳಮ್ಮಾ|| ಬಂದವಳು ನೀ ದಾವಾಕಿ||
ದಾವಾಕಿ ಪೇಳಮ್ಮಾ ದಾವ ರಾಜನ ಸತಿ
ದಾವ ಕಾರಣದಿಂದ ಧಾವಿಸಿಲ್ಲಿಗೆ ಬಂದೆ|| ಪ
ಸುಂದರಿ ವಾಣಿಯೋ|| ಅಥವಾ ಮುಶುಂದನ ರಾಣಿಯೋ||
ಇಂದ್ರನ ರಾಣಿಯೋ|| ಚಂದ್ರನ ರಾಣಿಯೋ||
ಚಂದ್ರಮುಖಿಯೇ ನೀನು ಚಂದಾಗಿ ಪೇಳಮ್ಮಾ|| 1
ಭಾತೃರಾದವರು ನಾವು|| ಪರಸ್ಪರ ಪ್ರೀತಿಯಿಂದಿರುವೆವು||
ಸೀತಾವಿರಹದಿಂದ ಸೋತುಬಂದೆವು ಇಲ್ಲೆ
ಮಾತೇ ಮೌನವು ಬಿಟ್ಟು ಮಾತಾಡು ಬ್ಯಾಗನೇ|| 2
ಬ್ರಹ್ಮಚರ್ಯವೆಂಬುದು|| ಈ ಕಾಲಕ್ಕೆ ನಮ್ಮಲ್ಲಿ ಇರುವುದು||
ತಮ್ಮ ಲಕ್ಷ್ಮಣ ನಾನು ನಿರ್ಮಲ ಗುಣರಾಮ
ನಮ್ಮಣ್ಣನಿವ ಪರಬ್ರಹ್ಮಾನಂತಾಧ್ರೀಶಾ|| 3
ಆರ್ಯಾ
ಲಕ್ಷ್ಮಣ ನಾಡಿದ ಮಾತೂ|| ಲಕ್ಷಿಗೆ ತರಲಿಲ್ಲ ದೇವಿ
ಮಾತಾಡಿದನೂ ಹೀಗೆಂದೂ||
ಪದ ರಾಗ:ಧನ್ಯಾಸಿ ಆದಿತಾಳ
ನಡಿ ನಡಿ £ಡಿ ನೀನು || ನುಡಿಯದ ಭಾಗಿಯೇನು|| ನ ||
ನಡಿ ನಡಿ ಹಿಂದಕು ಬಡಿವಾರೇನಿದು ಬಿಡು ಬ್ಯಾಗನೆ ನಿನ್ನ
ಎನಗೆ ಬಿಡದೆ ಬಾಣದಿಂದೊಡೆವೆನು ನಾನು| ಪ
ಎಕಾಂತ ಸ್ಥಳಕೆ ಕಾಲಕೆ ಒಬ್ಬಾಕೆ ಬರುವದಿದು
ದಿಂದ ನೀ ಬೇಕಾದಲ್ಲೆ|| 1
ವನವನ ಚರಿಸುಲವ ವನವಾಸಿಗಳಿಗೆ
ವನುತಿಯ ಸಂದರ್ಶನ ನಮಗ್ಯಾಕಿದು
ಗುಣವಂತಿಯೆ ಅರಕ್ಷಣ ನಿಲ್ಲದಲೆ 2
ಕಾಲದಲಿ ಗದ್ದಲ ಮಾಡದೆ ಬುದ್ಧಿವಂತೆಯೆ|| 3
ಅನುಜನ ಈಪರಿ ಸಿಟ್ಟು || ಅನುಸರಿಸುತಾ ಎದ್ದ
ನಿದ್ರೆಯನು ಬಿಟ್ಟು || ವನುತಿಯ ನೋಡಿದ ರಾಮ||
ವಿನಯದಿ ಮಾತಾಡಿವನು ಗುಣಧಾಮ || 1
ಪದ ರಾಗ:ದೇಶಿ ಅಟತಾಳ ಸ್ವರ :ಷಡ್ಜ
ದಾರ್ಹೇಳಮ್ಮಯಾ ಉದಾರ್ಹಳಗಿರುವೆ ನೀ || ದಾರ್ಹೇಳಮ್ಮಯ||
ದಾರಿಲ್ಲಿ ಸ್ಥಳದಲ್ಲಿ ದಾರನ್ಹುಡುಕುವಿ ನಿ|| ದಾ|| ಪ
ವನದಲ್ಲೆ ಇರುವಂಥ ವನದೇವತೆಯೇ ನೀ|| ದಾ||
ಮನಿಯಲ್ಲೇ ಇರುವಂಥ ಮನಿದೇವತೆಯೋ ನೀ || ದಾ|| 1
ಪ್ರಾಯಶ ಶ್ರೀಹರಿ ಮಾಯಾರೂಪಿಯೋ ನೀನು || ದಾ||
ಆಯಾದ ವಿಲ್ಲದೆ ಬಾಯಿಲೆ ಬಿಚ್ಚಾಡು || ದಾ||2
ಕ್ಲೇಶ ವೋಡಿಸುವಂಥ ಈಶನ ರಾಣಿಯೋ || ದಾ||
ದೋಷರಹಿ ತಾನಂತಾಧ್ರೀಶನ ರಾಣಿಯೋ|| 3
ಆರ್ಯಾ
ಕೋಮಲತರ ವಚನಗಳೂ || ರಾಮನ ಬಾಯಿಂದ
ಮಾತಾಡಿದಳು ಹೀಗೆಂದೂ|| 1
ಪದ ರಾಗ:ದೇಶೀ ಆಟತಾಳ ಸ್ವರ :ಷಡ್ಜÀ
ಕೇಳೋ ರಾಮನೆ ನಿನಗ್ಹೇಳುವೆ ಗುರುತವ || ಕೇಳೋ ರಾಮ||
ಕೇಳುತ ನಿನ್ನ ಮಾತು ಬಾಳ್ಹಾನಂದಾಯಿತು || ಕೇಳೋ|| ಪ
ವನದೇವತೆ ಅಲ್ಲ ಮನಿಯ ದೇವತೆ ಅಲ್ಲ || ಕೇ||
ವನಜಾಕ್ಷ ತುಳಜಾಯಂದ್ಯನಿ ಕೊಂಬುವೆ ನಾನೂ || ಕೇ|| 1
ಮಾಯಾರೂಪಿಯು ಅಲ್ಲ ಆಯಾಸಯನಗಿಲ್ಲ ||ಕೇ||
ಮಾಯಾರಮಣ ನಿನ್ನ ತಾಯಿ ಯಂದ್ಯನಿಸುವೆ || ಕೇ|| 2
ಶುದ್ಧ ಚಿನ್ಮಯ ಅನಂತಾದ್ರಿರಮಣ ನೀನು || ಕೇ||
ಸಿದ್ಧಾಗಿ ನಾ ಯಮುನಾದ್ರಿಯಲ್ಲಿರುವೆನು||3
ಆರ್ಯಾ
ಕಾಯಜ ಪಿತ ಕೇಳಿದನೂ|| ಹಾಯಿದು ಏನೆಂದೂ||
ಮಾತನಾಡಿದನೂ || ಆಯತಾಕ್ಷಿ ಆದವಳೂ || ತಾಯಿಯು
ಎನಗ್ನಾಂಗಾದಿ ನೀ ಪೇಳೆ|| 1
ರಾಮನ ಮಾತಿಗೆ ತುಳಜಾ || ಪ್ರೇಮದಿ ಮಾತಾಡಿದಳು
ತಾವಿರಜಾ || ರಾಮಗ ಕಥಿ ಆದಂತಾ|| ನೇಮಿಸಿ ಹೇಳಿದಳು
ಪೂರ್ವ ವೃತ್ತಾಂತಾ|| 2
ಪದ್ಯ
ರಾಮಕೇಳು ಪೂರ್ವದಲ್ಲಿ ಜಮದಾಗ್ನಿಯು
ಪರಶುರಾಮನಾಗಿರುವಿ ನೀನಾ ಮಹಾಮುನಿ ಪತ್ನಿ ನಾಮದಲೆ
ರೇಣುಕಿಯು ನೀ ಮಗನು ಎನಗಾದಿ ಭೂಮಿಯಲಿ ಪ್ರಾಖ್ಯಾತ ನಾಮತಿ
ಕೃತವೀರ್ಯಜನು ಕಾಮಧೇನುವು ಬಯಸಿ ಆ ಮುನಿಯ
ಕೊಂದಿರಲು ಆಮ್ಯಾಲ ಪತಿಯಿಂದ ನೇಮದಲಿ ಸಹಗಮನ
ನಾ ಮಾಡಿದೆನು|| 1
ಪತಿಯ ಪ್ರೇಮದಲಿ ಸ್ಮರಿಸಿ ಪರಶುರಾಮನು ಎನ್ನಸ್ಮರಿಸಿ ಕೈಮುಗಿದು
ಈ ಪರಿಯು ಮಾತಾಡಿದನು ವರ ಮಾತೆಯನು ಕೂಡಿ
ಇರದೆ ನೀ ಹೋದಿ ಸಂದರ್ಶನವು ಎಂದಿನ್ನ ತ್ವರದಿ ನೀ ಹೇಳೆನಗೆ
ಕೇಳುತಲೆ ತ್ವರದಿಂದ ನಾನು ಸುಂದರ ರೂಪವ ತೋರಿ
ಈ ಪರಿಯು ಮಾತಾಡಿದೆನು ವರಪುತ್ರ ಕೇಳು
ಮುಂದಿರುವ ತ್ರೇತಾಯುಗವು ಬರುತಿರಲು ಆಗ
ಸಂದರ್ಶನವ ಕೊಡವೆ|| 2
ಹೀಗೆಂದು ಹೇಳಿದ್ಯಾಗ ಆತಗ ನಾನು ಈಗ ಆತನೇ ನೀನು
ರಾಘವನು ಆಗಿರುವಿ || ಹಿಂಗೆನಲು ಮುಂದೆ ಆ ರಾಘವನು
ಕೊಟ್ಟಳಾಗ ತುಳಜಾದೇವಿ ಬ್ಯಾಗ ನಿನ್ನ ಕಾರ್ಯ ಚನ್ನಾಗಿ
ಆಗುವುದೆಂದು || ನಾಗವೇಣಿಯು ತಾನು ಹೋಗಿಬರುವೆನೆಂದು
ಆಗ ಅಲ್ಲೇವೇ ಗುಪ್ತಾಗಿ ಇರುವುವಳು|| 3
ಪದ ರಾಗ:ಶಂಕರಾಭರಣ ಆದಿತಾಳ ಸ್ವರ :ಮಧ್ಯಮಾ
ತಂದನು ಕೇವಳ್ಹಾಗ್ನಿಯ ಸಾಕ್ಷಿಯಿಂದೆ|| 1
ಆದರೂ ಇಷ್ಟಾರ್ಥಗಳು ಕೊಡುವೋದು|| 2
ವರದ ಶ್ರೀರಾಮ ವರವು ಕೊಟ್ಟಿರುವಂಥಾ ತುಳಜಾ
ದೇವಿಯ ದಿವ್ಯ ಮಹಿಮೆ || ಹರುಷದಿ ಕೇಳಿದರೆ
ಹರುಷವ ಕೊಡುವುದು ಪರಿಹರಿಸೋದು ಕಷ್ಟವೆಲ್ಲಾ 3
ಪುತ್ರರು ಆಗುವರು ಪೌತ್ರರು ಆಗುವರು ಸತ್ಯಮಾತಿದು
ಭಾವವ ಬಿಟ್ಟು|| 4
ಗ್ರಂಥವೆಂಬುವದಿಂದು || ಎಂಥಾದಾದರೂ ಎನೂ ಸಂತೋಷ
ನಮ್ಮ ಗುರುಗಳಿಗೆ|| ಸಂತರೆಂಬುವರಿಗೆ ಸಂತೋಷಾಗಲಿ
ನಮ್ಮಾನಂತಾದ್ರೀಶನೆ ನುಡಿಸಿದಾ|| 5
ಆರ್ಯಾ
ವರ ಕವಿತಾ ರZನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ ||
ಚರಿಸದೆನ್ನ ಉಪಾಯಾ || ಗುರುಕೃಪೆಯಿಂದಾಯಿತು ನಾಲ್ಕು
ಅಧ್ಯಾಯಾ|| 1
ಪದ ರಾಗ:ಪೂರ್ವಿ ಅಟತಾಳ ಸ್ವರ:ಮಧ್ಯಮಾ
ನಿತ್ಯ ಮಂಗಳವನು ಕೊಟ್ಟು
ಸಲಹುವ ತಾಯಿಗೆ|| ಪ
ಘನತರ ಕೈಲಾಸ ಮನಿಯು ಮಾಡಿದವಳಿಗೆ||
ಅನುದಿನ ಅಲ್ಲಿರುವಂಥಾಕಿಗೆ | ಅನುಭೂತಿ ತಪಸಿಗೆ
ಅನುಕೂಲಾಗುವೆನೆಂದು ಅನುಮಾನಿಲ್ಲದೆ ಬಂದಿರುವಾಕಿಗೆ|| 1
ಅಷ್ಟಭುಜಗಳುಳ್ಳಂಥಾಕಿಗೆ || ಅಷ್ಟೆಶ್ಚರ್ಯದಿಂದಿರುವಾಕಿಗೆ||
ದುಷ್ಟದೈತ್ಯನ ಕೊಂದಂಥಾಕೆಗೆ|| 2
ಅಮಿತ ಮಹಿಮೆ ಉಳ್ಳಂಥಾಕೆಗೆ||
ಯಮುನಾದ್ರಿಯಲಿ ಬಂದಿರುವಾಕೆಗೆ||
ಗಮನದಿಂದಲಿ ರಾಮ ಶ್ರಮಬಟ್ಟು ಅಲ್ಲೇ
ವಿಶ್ರಾಮಿಸಲು ದರ್ಶನ ಕೆÀೂಟ್ಟಾಕೆಗೆ|| 3
ಕಾಮಿತ ಫಲವನು ಕೊಡುವಾಕೆಗೆ||
ರಾಮನು ಸಾವಿರ ನಾಮದಿ ಸ್ತುತಿಸಲು||
ಪ್ರೇಮದಿವರವು ಕೊಟ್ಟಂಥಾಕಿಗೆ|| 4
ಚಿಂತಿಸುವರ ಮುಂದ ನಿಂತಾಕೆಗೆ||
ಸಂತೋಷವನು ಕೊಡುವಂಥಾಕಿಗೆ||
ಅಂತರಂಗದಲ್ಲಿಹ ಚಿಂತೆಯ ಬಿಡಿಸಿ||
ಅನಂತಾದ್ರೀಶನ ತೋರುವಂಥಾಕೆಗೆ|| 5