ಏನೆಂದುಸರಲಿ ನಾ ನೆರೆ ಸಂತರಾ |
ಸ್ವಾನುಭವಗಳನುವಾಗೀ
ಮಾನಿಸಿರೋಳುಸಲೆ ಮಾನಿಸ ಸ್ಥಿತಿಯಲಿ
ತಾನಿಹ ಉನ್ಮನಿಯಾಗಿ ಪ
ಕಾಮವು ಹರಿಪದ ತಾಮರಸವ ನಿ |
ಷ್ಕಾಮದ ಭಕುತಿಗಳಲ್ಲಿ |
ಆ ಮಹಾ ಕೋಪವು ಈ ಮನಸಿನ ಗುಣ |
ನೇಮಿಸಿ ಶೀಕ್ಷಿಸುವಲ್ಲಿ |
ಆ ಮೋಹ ಲೋಭವು ಯಾಮವಳಿಯದಾ |
ನಾಮ ಕೀರ್ತನೆಯಲ್ಲಿ |
ತಾ ಮರೆಯದ ಅತಿ ವ್ಯಾಮೋಹ ತನ್ನಯ |
ಪ್ರೇಮದ ಕಿಂಕರರಲ್ಲಿ 1
ಮದವತಿ ಇಂದ್ರಾದಿ ಪದಗಳ ಸಿದ್ದಿಗೆ |
ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು |
ವದಗಿಹ ಮತ್ಸರ ಕುದಿವಹಂಕಾರದ |
ಮೊದಲಿಗೆ ತಲೆಯತ್ತಿಸಗುಡರು |
ಇದರೊಳು ಸುಖದು:ಖ ಉದಿಸಲು ಹರಿಯಾ |
ಜ್ಞದೆಗತಿಗಡ ಸಮಗಂಡಿಹರು |
ಉದಕದಲಿ ಕಮಲದ ಎಲೆಯಂದದಿ |
ಚದುರತೆಯಿಂದಲಿ ವರ್ತಿಪರು 2
ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ |
ನಿಲಿಸದೆ ನಿಲ್ಲದೆ ಮುಣಗುವದು |
ಪರಿ |
ನಳನಳಿಸುತ ತೇಲುತಲಿಹುದು |
ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ |
ಬೆಳಗಿನ ಘನದೊಳು ಮನ ಬೆರೆದು |
ನಲವರು ಮಹಿಪತಿ ವಲುಮೆಯ ಪಡೆಯದ |
ಹುಲು ಮನುಜರಿಗಿದು ಭೇದಿಸದು 3