ಅಹುದಹುದನಾಥ ಬಂಧು
ಅಹುದಹುದನಾಥ ಬಂಧು|ಅನುಪಮ್ಯ|
ಮಹಿಮೆ ಕಾರುಣ್ಯಸಿಂಧು|
ಏನೆಂದು ಪೇಳೆಲೆಮ್ಮಾ|ಈ ದಯಕ|
ತಾನು ಪಮೆ ಇಲ್ಲವಮ್ಮಾ|
ನ್ಯೂನಾರಿಸದೆ ಬಂದನು,ಕ್ಷಮೆಯಿಂದ|
ತಾನಾಗಿ ಸಲಹುತಿಹನು|
ಜ್ಞಾನವಿಲ್ಲದೆ ತರಳನೆಂದಪೇಕ್ಷಿಸದೆನ್ನ|
ಮನ ನೆನೆವಿನೊಳಗಿಟ್ಟು ತನ್ನ ಅಂಘ್ರಿಯದಾ 1
ಪತಿತರೊಳು ಪತಿತ ಅಧಮಾ|ಅಮೂಲ್ಯ|
ಪತಿಹೀನ ಮೂಢ ಪರಮಾ|
ಸುತ್ತ-ಭಕುತಿ ಮಾಡಲರಿಯೆ|ಚತೆರ ಸಂ|
ಸ್ಕøತ ಮಾತನಾಡಲರಿಯೇ|
ಗತಿಗೈದರೊಂದೊಂದು ವೃತದಿ ಮೊದಲಾದವರು|
ಕ್ಷಿತಿಯೊಳಗೆ ಎನ್ನಂಥ ಶೂನ್ನರಾರಮ್ಮ 2
ನೆಲಿಗೆ ಮುಯ್ಯಕ ಮುಯ್ಯವು|ಈ ತೆರದಿ|
ಸಲೆ ನಡೆತಿ ಉಂಟು ಕೆಲವು|
ಕೊಳದೆ ಕೊಡುವವರಿಂದಿಗೆ|ಆರಿಲ್ಲಾ|
ನಳಿನಜೇಂದ್ರಾದ್ಯರೊಳಗೇ
ಒಲಿದು ಮಹೀಪತಿ ಸುತನ ಕರವಿಡಿದು ತನ್ನ|
ದಾಸರ ದಾಸ ದಾಸನೆನಿಸಿದ ಬಿರದಿಗಿಂದು 3