ಏನೆಂದೀದೇಹ್ಯವನು ನಂಬಿದಿ ಮನವೆ ನೀ
ಏನೆಂದೀ ದೇಹ್ಯವನು ನಂಬಿದಿ ಪ
ಏನೆಂದು ನಂಬಿದ್ಯೋ ಆನಂದದ್ಹಿಗ್ಗುತ
ಕ್ಷೀಣವಾಗೊಂದುದಿನ ಮಣ್ಣು ಗೂಡುವುದರಿತು ಅ.ಪ
ತಳಕ್ಹಾಕಿ ಜೋಡಿಸಿ ಹಲವು ನರಗಳಿಂದ
ಬಲವಾಗಿಬಿಗಿದ ಈ ಎಲುವಿನ ಹಂದರ 1
ರೋಗಕ್ಕೆ ಇದು ತವರಾಗಿ ಒಂದಿನ ನಾಶ
ವಾಗಿ ತಾ ಕೈಬಿಟ್ಟು ಪೋಗುವ ಮಂಟಪ 2
ಹಲವು ವಿಧದಿ ಮಜ್ಜ ಮಲ ಮೂತ್ರ ಬಲುಹೇಯ
ಕುಂಡಲ 3
ಬಿಲದ್ವಾರ ಒಂಬತ್ತು ತುಳುಕಿತುಂಬ್ಹರಿಯುತ
ತೊಳೆಯದಿರಲು ನಿಮಿಷ ಹೊಲಸಿಕ್ಕಿ ನಾರುವುದು 4
ತಂದೆ ಶ್ರೀರಾಮನಂ ಹೊಂದಿ ಭಜಿಸದೆ ಗಾಢ
ಅಂಧಕಾರದಿ ಬಿದ್ದು ನಂದಿಪೋಗುವ ತನು 5