ಏನೆಂದರು ಸರಿ ಬೀಳ್ವದು ನಮ್ಮ
ಶ್ರೀನಿವಾಸನ ಮಹಿಮಾನುಸಂಧಾನದಿಂ ಪ.
ಶಯ್ಯದಿಂದೇಳುತ ಶಾರೀರದಾಲಸ್ಯದಿಂ-
ದಯ್ಯ ಅಪ್ಪ ಅಮ್ಮನೆಂಬುವರಾ-
ಜೀಯನ ಗುಣನಾಮಕನುವಾಗಿ ತಿಳಿದರೆ
ಕಯ್ಯ ಪಿಡಿದು ಕಾವ ಕರುಣಾಳು ರಾಜಗೆ 1
ಅಪತತ್ವದಲಿ ನಿಂತು ಅಪ್ಯಾಯನ ಮಾಳ್ಪ
ತಪ್ಪನೆಂಬುದಕಿದು ಕಾರಣವು
ಮುಪ್ಪುರಹರನಯ್ಯನು ಪೆತ್ತ ದೊರೆಯನು
ಒಪ್ಪಲಾರದೆ ಅಮ್ಮ ಅಯ್ಯನೆಂಬುವ ನಾಮ 2
ಕುರಿಯೊ ಮರಿಯೊ ಎಂಬ ದಾತಗೆ ಭಿನ್ನ ಹ-
ವರವುದು ಹರಿಗೆ ಮೂಜನವೆಲ್ಲವು
ಕುರಿಯಂತೆ ವಶ್ಯವಾಗಿರುವುದು ಭವಬಂಧ
ಹರಿದ ಜ್ಞಾನದ ಮುಳ್ಳಮುರಿಯೆಂಬ ಭಾವದಿಂ 3
ಮೂರಾರು ಪುರಾಣ ಮೂಲ ರಾಮಾಯಣ
ಭಾರತ ಪಂಚರಾತ್ರಾದಿಗಳು
ಸೇರಿ ಪೇಳುವುದೆಲ್ಲ ಸಿರಿಯರಸನ ನಾಮ
ವಾರಿಧಿಯೊಳಗಿನ ತೆರೆಗಳಂದದಿ ತೋರ್ಪ 4
ನಾದ ಬಿಂದು ವರ್ಣದಾತನುದಾತ್ತ ಸ್ವ
ರಾದಿ ಸಕಲ ಶಬ್ದ ವಾಚ್ಯ-
ನಾದ ಶ್ರೀದೇವಿಯರಸ ವೆಂಕಟರಾಜನರಿವಂಥ
ಹಾದಿಯ ತಿಳಿದರಗಾಧ ಮಹಿಮಾ ನಿನ್ನ 5