ವಾಸುದೇವನ್ನಾ ಪಾದವ ನಂಬಬಾರದೇ |
ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ
ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ |
ಯನುತ ಬಂದರೆಯುನೊಡದಿರು ಅವರ ಕಡೆಯಾ 1
ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ |
ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2
ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು |
ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3
ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ |
ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4
ಎರಡು ದಿನದಿದು ಸಂಸಾರವೆಂಬುದು ನೋಡಿ |
ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5
ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು |
ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6
ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ |
ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7