ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯನಂಥ ಕರುಣಾಳು ಕಾಣೆನು ಜಗದೊಳಗೆ ಪ ಏನೆಂದರಿಯದ ಪಾಮರ ನಾನು | ತಾನೊಲಿದೀಗೆನ್ನ ನುದ್ಧರಿಸಿದನು1 ತನ್ನನುಭವ ನಿಜ ಮಾತಿನ ಗುಟ್ಟು | ಎನ್ನೊಳುಸುರಿ ಘನ ತೋರಿಸಿ ಕೊಟ್ಟು | ಧನ್ಯನ ಮಾಡಿದಸೇವೆಯಲಿಟ್ಟು 2 ಮಾಡುವ ಘನ ತುಸು ತಪ್ಪನೆ ಹಿಡಿಯಾ | ಬೇಡಿಸಿಕೊಳ್ಳದೆ ನೀಡುತ ಪಡಿಯಾ | ರೂಢಿಗಾದನು ಇಹಪರದೊಡೆಯಾ3 ತನ್ನವನೆನಿಸಿದ ಮಾತಿಗೆ ಕೂಡಿ | ಮನ್ನಣೆಯಿತ್ತನು ಅಭಯವ ನೀಡಿ | ಇನ್ನೇನ ಹೇಳಲಿ ಸುಖ ನೋಡಿ4 ತಂದೆ ತಾಯಿ ಬಂಧು ಬಳಗೆನಗಾಗಿ | ನಿಂದೆ ಸದ್ಗುರು ಮಹೀಪತಿ ಮಹಾಯೋಗಿ | ಕಂದನ ಸಲಹುವ ಲೇಸಾಗಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಸುದೇವನ್ನಾ ಪಾದವ ನಂಬಬಾರದೇ | ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ | ಯನುತ ಬಂದರೆಯುನೊಡದಿರು ಅವರ ಕಡೆಯಾ 1 ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ | ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2 ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು | ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3 ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ | ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4 ಎರಡು ದಿನದಿದು ಸಂಸಾರವೆಂಬುದು ನೋಡಿ | ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5 ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು | ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6 ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ | ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಲಭ ಸೇವೆ ನೋಡಿ ಶ್ರೀ ಹರಿಯ ಖುಲ್ಲಮನುಜ ತಾ ನಿಜನೆಲಿನರಿಯ ಧ್ರುವ ಗುಹ್ಯ ಸೇರಲಿಲ್ಲ ಗುಹ್ಯ ಗುಪ್ತವ 1 ನೀರಮುಣಗಲಿಕ್ಕಿಲ ನಾರಿಯ ಬಿಡಲಿಲ್ಲ ದಾರಿ ತಿಳಿದದ ಬಲ್ಲ ಹರಿಭಕ್ತಿಯ 2 ಶೀಲ ಕೈಗೊಳ್ಳಾಲಕಿಲ್ಲ ಹಲವು ವ್ರತ ಹಿಡಿಯಲಿಲ್ಲ ಮೂಲ ತಿಳಿದವ ಬಲ್ಲ ನೆಲೆನಿಭವ 3 ಮನವುನ್ಮನವಮಾಡಿ ಘನಸುಖದೊಳು ಕೂಡಿ ಜ್ಞಾನವಂದಭ್ಯಾಸಮಾಡಿ ಅನುದಿನದಲಿ 4 ಏನೆಂದರಿಯದ ಮಹಿಪತಿಗೆ ತಾನೆ ತಾನೊಂದು ಜ್ಞಾನ ಭೋಧಿಸಿದ ಗುರು ಸ್ವಾನುಭವದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು