ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನಸೆ ಎಲೆ ಮನಸೆ ಹರಿಪಾದ ನಂಬು ಸುಲಭ ಭಕ್ತರಿಗಾತ ಕೊಡುವ ನಿನಗಿಂಬು ಪ ಕುಲಹೀನನೆನಬೇಡ ಹಳಿದುಕೊಳ್ಳಲಿ ಬೇಡ ತಿಳಿಗೇಡಿಯೆನಬೇಡ ಕಳವಳಿಸಬೇಡ ಮಲಿನವೆಂದೆನಬೇಡ ಜಳಕ ಮಡಿಯೆನಬೇಡ ತಿಳಿದು ಭಜಿಪರ ಬೆಂಬಲನು ನಾನೆಂಬ 1 ವಿಪಿನ ಸೇರಲಿಬೇಡ ಕೌಪೀನ ಬೇಡ ಕಪಟಬುದ್ಧಿಯ ಬಿಟ್ಟು ಸಫಲ ಮಾನಸದಿಂದ ಆಪತ್ತು ಬಂಧುಯೆನೆ ಕೃಪೆಮಾಡ್ವ ಬಂದು 2 ದಾನಧರ್ಮವು ಬೇಡ ನಾನಾ ಕರ್ಮವು ಬೇಡ ಮೌನದೊಳಿರಬೇಡ ಏನುವ್ರತಬೇಡ ಧ್ಯಾನದಾಯಕ ಎನಗೆ ನೀನೆ ಗತಿಯೆಂದೆನಲು ದೀನದಯ ಶ್ರೀರಾಮ ಮಾಣದೆ ಕಾಯ್ವ 3
--------------
ರಾಮದಾಸರು