ಕಥನಕಾವ್ಯಗಳು
ಶ್ರೀ ವೆಂಕಟೇಶ ಪಾರಿಜಾತ
ಅಧ್ಯಾಯ ಒಂದು
ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕøಷ್ಟ ಇತೀ ಪಿತ:
ಗೋಕ್ಷೀರ ಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ |
ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿನಾರತಿ ಮಾಡಿ ಬೇಡುವೆ
ಭಾಷೆ ಭಾಷೆಗೆ ಎನಗೆ ಬುದ್ಧಿವಿಕಾಸ ಕೊಡುಯಂದು
ಕರಮುಗಿದು ಬೇಡುವೆ
ದಾಶರಥಿ ನಿಜದಾಸ ಕಲ್ಲೊಳ್ಳೀಶಗೊಂದಿಸುವೆ 1
ಸಂತತಿಗೆ ನತಿಸುವೆ
ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ
ಜಗತಿಯಲಿ ಜನಿಸಿ ಅವರಾ
ಪೂಜಿತಾಖ್ಯವು ವಹಿಸಿದವರನು ಪೂಜಿಸುವೆ ಬಿಡದೆ2
ಪೊಂದಿ ಆ ಗುರು
ಪುತ್ರರಾಗಿರುವ ವಿಷ್ಣುತೀರ್ಥರನು ನಮಿಪೆ ಮತ್ತೆ
ಸ್ವೋತ್ತಮರಾಗಿ ಇರುವ ಗುರುಗಳಿಗೊಂದಿಸುತ ಸ
ರ್ವೋತ್ತಮಾನಂತಾದ್ರಿ ರಮಣನ ಮಹಿಮೆ ಪೇಳುವೆನು3
ವಚನ
ಬುದ್ಧಿ ಪೂರ್ವಕ್ಹಿಂ
ಸಂಪೂರ್ಣ ಸರ್ವ
ದೇವೋತ್ತಮನು ಇರುವನ್ಯಾರೆಂದು ತಿಳಿ ಸರ್ವಲೋಕದಲಿ
ಕೇಳಿ ಪೂರ್ವದಲ್ಲಿ
ಪೋದ ಪೂರ್ವಿಕನÀ ಮನೆಯಲ್ಲಿ ಗರ್ವ ಅವನಲ್ಲಿ ಕಂಡು
ಇರುವ ನಡೆದನಲ್ಲಿ 1
ನೋಡಿದನು ಆಗಲ್ಲಿ
ಪ್ರೌಢೆ ಪಾರ್ವತಿಯು ಮಾತಾಡಿದಳು ನಾಚುತಲಿ ಬೇಡಬಿಡು
ಪ್ರಾಣೇಶ ನೋಡು ಭೃಗು ಮುನಿಬಂದ ಬೇಡಿಕೊಂಬುವೆನೊ
ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು
ಪೂಜೆಯ ಬೇಡ ಈ ಲೋಕದಲಿ ನೋಡಿ ಲಿಂಗವ
ಪೂಜೆ ಮಾಡಲಿ ಜನರು 2
ಪರಿ ಶಾಪ ಮೆಟ್ಟಿದನು ವೈಕುಂಠ
ಥಟ್ಟನೆ ಮತ್ತಲ್ಲಿ ದಿಟ್ಟ ದೇವನ ಕಂಡ ಪಟ್ಟದರಸಿಯಕೂಡಿ
ಧಿಟ್ಟಾಗಿ ಮಲಗಿರಲು ಸಿಟ್ಟಿಲÉೂದ್ದನು ಒಳ್ಳೆ ಪೆಟ್ಟು ಅವನೆದಿಗೆ
ಮುಟ್ಟಿ ಮುನಿ ಪಾದವನು ತುಷ್ಟನಾಗಿ 3
ಧ್ವನಿ
ಮೇಲಿಷ್ಟು ಸಿಟ್ಟು
ಕಾರಣ ಪೇಳಿಷ್ಟು
ತಪ್ಪಿತು ಕ್ಷಮಿಸಿಷ್ಟು 1
ಎಳ್ಳುಕಾಳಷ್ಟು
ನೊಂದು ಕೊಂಡಿದ್ದಾವು ಎಷ್ಟೋ 2
ಧರೆಯೊಳಗೆ ದ್ವಿಜರಿಗೆ ಸರಿಯಾರು ಇಲ್ಲೆಂದು
ಬರುವುದು ಭಯ ಬಹಳಷ್ಟು ವರದಾನಂತಾ
ದ್ರೀಶನ ಪರಮ ಭಕ್ತರಿಗೆ ಬರಬಾರದೆಂದಿಗೂ ಸಿಟ್ಟು 3
ವಚನ
ಇಂದಿರಾಪತಿಯು ಹೀಗೆಂದು ಮುನಿಪಾದಂಗಳÀÀÀ ಚಂದದಿಂದಲಿ
ಒತ್ತಿತ್ವರದಿಂದ ಉಷ್ಣೋದಕವನು ತಂದು ತೊಳೆಯುತ
ಇಂದು ಪಾವಿತನಾದೆನೆಂದು
ಹರುಷದಲ್ಲಿ ಮುಂದೆ ಭೃಗುಮುನಿಯು ಮುಕುಂದನ
ಸರ್ವರಿಂದಧಿಕ ಸತ್ಯತಿಳಿರೆಂದ ಮುನಿಗಳೆಲ್ಲ
ಮುಂದೆ ವೈಕುಂಠದಲಿ ಇಂದಿರಾದೇವಿ ಗೋವಿಂದನಾಟವ
ಕಂಡಂದಳೀ ಪರಿಯು1
ರಾಗ:ಮೋಹನ ಕಲ್ಯಾಣಿ ಆದಿತಾಳ
ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೇ ನೀನು
ತಿರುಕನಾಗಿ ಇರುತಿರುವ ಭೂಸುರನು ಭರದೊಳೊದ್ದ
ನಿನ್ಹಿರಿಯತನವೇನು ಪ
ನಿನ್ನ ಶ್ರೀವತ್ಸವಿದು ಬಹು ಮಾನ್ಯವು ಎಂದೆನಿಸುವುದು
ಮಾನ್ಯ ವಾಗಿಹುದು 1
ಬಡವ ಬ್ರಾಹ್ಮಣರಿಂದ ನೀ ಕಡೆಗೆ
ಕೂಡಿರು ಚಂದಾ ಮಡದಿಯ ಹಂಬಲ ಬಿಡುದೂರದಿಂದ
ತಡಮಾಡದೆ ನಾ ನಡದೆ ಗೋವಿಂದಾ 2
ಇನ್ನೆನ್ನ ಗೊಡವ್ಯಾಕೊ ಬಿಡು ನಿನ್ನ ಸಂಗತಿ ಸಾಕು 3
ಎನ್ನ ವೈರಿಗಳ ಮನ್ನಿಸುವ್ಯಾಕೋ ನನ್ನಿಚ್ಛೆಯಲಿ ನಾ
ಇನ್ನಿರಬೇಕೊ 4
ಹಿಂದಕೆ ಕುಂಭೋದ್ಭವನು ಎನ್ನ ತಂದೆಯ ನುಂಗಿದ ತಾನು
ಅಂದಿಗೆ ಎನಗಾನಂದವು ಏನು 5
ಮತ್ತೆನ್ನ ಸೊಸೆಗವರು ಬಹು ಭಕ್ತಿಯಲಿ ಪೂಜಿಸುವರು
ವೈರಿಯವರ್ಹೊರತು ಇನ್ಯಾರು 6
ಹುಡುಗ ಬುದ್ಧಿಯು ಎಂದು ನಾ ಕಡೆಗೆ ಬಲ್ಲೆನು ನಿಂದು
ಮಡುವ ಧುಮುಕಿ ಕಲ್ಪಡೆಯ ಪೊತ್ತಿಹುದು
ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು 7
ಬಡವ ಬ್ರಾಹ್ಮಣನಾದಿ ಚಪಗೊಡಲಿಯ ಕೈಯಲಿ ಪಿಡಿದಿ
ಮಡದಿಯ ಕಳಕೊಂಡು ತುಡುಗ ನೀನಾದಿ
ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ 8
ಎಷ್ಟು ಪೇಳಲೆ ನಿನಗೆ ನೀನೆಷ್ಟು ಮಾಡಿದಿ ಹೀಗೆ
ಅಷ್ಟು ಮನಸಿನೊಳಗಿಟ್ಟುನೂ ಆಗ ಕಟ್ಟಕಡಿಗೆ ಬಲು
ಸಿಟ್ಟು ಬಂತೆನಗೆ 9
ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿನಾನು
ಬಲ್ಲಿದನಂತಾದ್ರಿಯೊಳಿರು ನೀನೆ 10
ರಾಗ:ಸಾರಂಗ ಆದಿತಾಳ
ಪರಿ ಕಲಹ ಮಾಡಿ ತ್ವರಿತದಿಂದ
ನಡೆದಳು ಕರವೀರಪುರಕೆ ಪ
ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು ಸಿರಿಯಿಲ್ಲದ
ವೈಕುಂಠ ಸರಿಬಾರದು ಎನಗೆ1
ದೀನನಾದೆನು ಹಾ
ನಾನು ಕಾಣುವೆನೆಂದು
ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು 2
ಇನ್ಹ್ಯಾಂಗೆ ಇರಲಿ ಇನ್ನಾಕೆಯ ಹೊರತು ಕಣ್ಣಿಗೆ
ವೈಕುಂಠಾರಣ್ಯ ತೋರುವುದು ಇನ್ನೆಲ್ಹೋಗಲಿ ಎಂದು
ಬಂದ ತನ್ನಿಂದ ತಾನು3
ಶ್ರೀ ವೈಕುಂಠಕಿಂತ ಶ್ರೀ ವೆಂಕಟಗಿರಿಯು ಅಧಿಕವೆಂದು
ಭಾವಿಸೀ ಪರಿಯು ಆವತ್ತಿಗೆ ಬೇಗಲ್ಲೇ ತಾ ವಾಸಕೆ ನಡೆದ
ದೇವ ತಿಂತ್ರಿಣೆಯೆಂಬೋ ಆ ವೃಕ್ಷವಕಂಡ 4
ಅಡಗಿದ ಮೆಲ್ಲನೆ ಪೋಗಿ
ಅಲ್ಲ್ಯಾದೇಶದಲೊಬ್ಬ ಜೋಳಾಖ್ಯನು ಎಲ್ಲರಿಂದಲಿ
ತನ್ನ ಪುರದಲ್ಲೆ ಇರುವಾ5
ಶಿವನ ಕರುವಿನ ಮಾಡಿ
ತಾನಾಕಳಾಗಿ ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು
ಕೊಂಡ 6
ನಿತ್ಯ ವರಸಾಧು ಗುಣದಿಂದ
ಸರಸಾಗಿ ಕೂಡಿ
ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ7
ಬಂದ ಕಾರಣವೇನು
ಎಂದು ಸ್ಮರಿಸುತಲಿ ಇಂದಿರೇಶಗೆ ಭಕ್ತಿಯಿಂದ ಕ್ಷೀರವನು
ಚಂದಾಗಿ ಕರೆವುದು ಬಂದು ಹುತ್ತಿನಲಿ 8
ಹಿಂಡದು ತನ್ನ ಕರುವಿನ
ಪರಿ ರಾಜನ ಹೆಂಡತಿಯ
ಆಗ ಚಂಡ ಕೋಪದಿ ಗೋಪನ ಕಂಡಂದಳು ಹೀಗೆ 9
ವಚನ
ನೀ ಏನು ಮಾಡುವಿನಿತ್ಯ
ಕುಡಿವುದೋ ವತ್ಸ ಏನುಮಾಡು
ಪ್ರಾಣಕೊಂಬುವೇನು
ತಾನು ಗಾಭರಿಗೊಂಡು
ಧ್ಯಾನಿಸುತ ಆ ರಾಜ
ಮಾನಿನಿಗೆ ನುಡಿದ ಬಹು ದೀನನಾಗಿ 1
ರಾಗ:ದಂತಿ ಆದಿತಾಳ
ಅರಿಯೆ ತುರುಗಳ
ಕಾಯ್ಕೊಂಡು ಬರುವೆ ನಾ ಇದಹೊರ್ತು ಪ
ಕಟ್ಟುವರ್ಯಾರೊ ಅರಿಯೆ
ಬರಿದೆ ನೀ ಎನ್ನ ಮೇಲೆ ಹರಿಹಾಯುವದ್ಯಾಕೆ ಅರಿಯೆ 1
ಪಾಲಾಗುವುದೊ ಅರಿಯೆ
ಸರಸಾಗಿ ತಿಳಿನೀನು ನೆರೆಯೊರೆಯವರನಾ ಅರಿಯೆ 2