ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀಳು ಮನವೆ ಏನುಕೆಟ್ಟೆಲೋ ಹಾಳು ಮಾಡಿದಿ ದಿನಗಳ ಪ ನೀಲಮೇಘಶ್ಯಾಮ ಹರಿಪಾದ ಶೀಲಭಕ್ತಿಲಿ ಸ್ಮರಿಸದೆ ಅ.ಪ ಬಾಲತನದ ಸುಶೀಲ ದಿನಗಳ ಜಾಳುಗೈದೆಲೋ ಆಟದಿ ನಾಳೆ ಕಾಲನು ಸೀಳಿ ಕೊಲುವಾಗ ತಾಳಿ ಬಾಳುವುದೆಂತೆಲೊ 1 ಪ್ರಾಯದಿನಗಳ ಕಾಯಜನ ಮಹ ಮಾಯದಾಟದಿ ನೀಗಿದ್ಯೊ ಮಾಯಮೃತಿಯ ಬಾಯೊಳು ಸಿಲ್ಕಿ ನೋಯುವಾಗ ಕಾಯ್ವರಾರೆಲೊ 2 ಇಷ್ಟಕ್ಕಾದರೂ ಕೆಟ್ಟಗುಣಗಳ ಬಿಟ್ಟು ಶ್ರೀರಾಮಪಾದವ ನಿಷ್ಠೆಯಿಂ ಮನಮುಟ್ಟಿ ಭಜಿಸಲೆ ದುಷ್ಟಭವದಿಂ ಗೆಲಿಸುವ 3
--------------
ರಾಮದಾಸರು