ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ಪ ಸುರರು ಹಬ್ಬವ ಕೆಡಿಸೆ ಸುರಪತಿಯು ಕೋಪದಲಿ ಭರದಿಂದ ಕಲ್ಲು ಮಳೆಯನು ಕರೆಯಲಾಗ ಕಿರುವೆರಳ ತುದಿಯಲ್ಲಿ ಗಿರಿಯ ನೀನಾಂತು ಹಗ ಲಿರುಳೇಳು ದಿನ ಬೋವಿಗಳಂತೆ ಕೊಡೆವಿಡಿದ 1 ಭವ ತಿಮಿರ ಶರಧಿಯದಾಂಟಿಸುವ ವೋಲು ಸುರಿವ ಮಳೆಗತ್ತಲೆಗೆ ಬೋವಿಯಾಗಿ ಕರದಲ್ಲಿ ಕೊಡೆ ದೀವಟಿಗೆಯ ಪಿಡಿದೆನ್ನ ಮನೆ ಪರಿಯಂತ ಕಳುಹಿ ಕ್ಷುಧೆಯಾಯಿತೆಂಬುದೇನು 2 ಕೊಟ್ಟ ಕಜ್ಜಾಯಂಗಳಿಗೆ ನೀ ಸೆರಗೊಡ್ಡಿ ಕಟ್ಟಿ ಕೊಂಡೊಯ್ದು ಲಕ್ಷ್ಮಿಯ ಬಳಿಯೊಳು ಇಟ್ಟರ್ಧವನು ಎನ್ನ ಸಂತತಿಗೆ ನೀಕರುಣಿಸಿದೆ ಇಷ್ಟರೊಳಗೆ ವೈಕುಂಠಪತಿ ಚೆನ್ನಿಗರಾಯಾ 3
--------------
ಬೇಲೂರು ವೈಕುಂಠದಾಸರು
ನೋಡೆಲೊ ಎನ್ನ ಕರುಣದಿ ಹರಿ ಮಾಡೊ ಉದ್ಧಾರ ಬೇಗದಿ ಪ ರೂಢಿಯೊಳು ಮುಖ ಮಾಡಿ ಪರರನು ಮಾಧವ ಅ.ಪ ಸೃಷ್ಟಿಯೊಳೆನ್ನ ನೂಕಿ ಯಾತಕೆ ಬಿಟ್ಟಿ ಬೇಸರ ಮಾಡುವಿ ಕೆಟ್ಟಹೊಟ್ಟೆಯ ಕೊಟ್ಟು ವಿಧವಿಧ ಭ್ರಷ್ಟನೆನಿಸುವುದೇನಿದಭವ 1 ಜ್ಞಾನಶೂನ್ಯನ ಮಾಡೀಭವಕೆ ನೀನೆನೂಕಿದೆ ಮತ್ತಾರೆಲೊ ಏನುಕಾರಣ ಪಾಪಿಯೆಂದೆನ್ನ ಹೀನದೃಷ್ಟಿಲಿ ನೋಡ್ವೆ ದೇವ 2 ಏನು ಸ್ವಾಧೀನ ಕೊಟ್ಟದ್ದೆನ್ನಗೆ ನೀನೆ ನ್ಯಾಯವು ಪೇಳಯ್ಯ ನೀನೆ ಸಕಲ ಸ್ವತಂತ್ರ ಎನಗೆ ಜ್ಞಾನ ಪಾಲಿಸಿ ಪೊರೆ ಶ್ರೀರಾಮ 3
--------------
ರಾಮದಾಸರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು