ದೂರಮಾಡು ದೂರಮಾಡು ದುರ್ಜನ ನೆರೆಯ
ಸಾರಸಾಕ್ಷನೆ ಬೇಗ ದುಷ್ಟಸಂಗತಿಯ ಪ
ಸೇಂದಿ ಸೆರೆ ಕುಡಿದು ಮನಬಂದಂತೆ ಕುಣದಾಡಿ
ನಿಂದಿಸಿ ಕಂಡವರಿಂ ತಿಂದು ಲತ್ತೆಯನು
ಮಂದಿಯೋಳ್ಮುಖದೋರ್ವ ಹಂದಿಮನುಜರ ದರ್ಶ
ನೆಂದೆಂದು ಬೇಡೆನಗೆ ಮಂದರಾದ್ರಿನಿಲಯ 1
ನೂತನದ ಮಾತಾಡಿ ಖ್ಯಾತಿಯಿಂ ತೋರ್ಪಡಿಸಿ
ಮಾತುಮಾತಿಗೆ ವಂಚಿಸಾತುರಕೆ ಪರರ
ಘಾತಗೈಯುವ ಮಹಪಾತಕರ ಸಂಗ ಮಮ
ದಾತ ಜಗನ್ನಾಥ 2
ಧ್ಯಾನದಾಸರ ಕಂಡು ಜ್ಞಾನವಿಲ್ಲದೆ ತುಸು
ಹೀನಮಾತುಗಳಾಡಿ ಏನುಕಾಣದಲೆ
ಶ್ವಾನನಂದದಿ ಚರಿಪ ಮಾನಹೀನರ ನೆರಳು
ಏನಿರಲುಬೇಡ ಮಮಪ್ರಾಣ ಶ್ರೀರಾಮ 3