ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
ಏನುಂಟು ನಿನ್ನೊಳಗೆ-ನಾಬೇಡಲು-ಏನು ಕೊಡುವೆ ಯನಗೆ ಪ ಬೇಡಿದೆಮಾನವನೋಡದೆ ಅ.ಪ. ಹಾರುವನಿಗೆ ಗುರಿಮಾಡಿದೆ ಗರಳನಹಾಸಿನೊಳೆರಗಿದೆ ಕೃಷ್ಣ 1 ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆ ಯುಳ್ಳರೆವನವಾಸ ವೇಕೆ 2 ಚಿಂತಾಮಣಿಗಳನು ಸುತ್ರಾಮನಿಗಿತ್ತು ನೀ ದಾಮೋದರನಾದೆ ತಾಮರಸಾಕ್ಷ 3 ಜಾತಿ ನೋಡದೆ ಜಾಂಬವತಿಗೂಡಿದೆ ಮಾತು ನೋಡದೆ ಬರಿಮಾಯೆಯ ಪಿಡಿದೆ 4 ಸ್ಮøತಿಯೊಂದಿತ್ತರೆಸಾಕೆನೆಗೆ ಪಾಲಿಸು ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ದಾನಧರ್ಮವ ಮಾಡಿ ಸುಖಯಾಗು ಮನವೆ ಪ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1 ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2 ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3 ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4 ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5
--------------
ಕನಕದಾಸ
ನಾನೀಯದಿದ್ದರೆ ನೀನೇನನೀವೆ ಪ ನಾನು ಎಂಬುದು ಮಾತ್ರ ನಾ ನಿನಗಿತ್ತರೆ ಏನನೀಯುವೆ ರಂಗ ದೀನದಯಾಳು ಅ.ಪ ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ ನವಫಲವನಿತ್ತವಳಿಗೆ ಒಲಿದೆ ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1 ಗಜರಾಜನಂದು ಪಂಕಜವೊಂದನಿತ್ತಂದು ಅಜಗರನನು ಕೊಂದು ಸೌಜನ್ಯವನಿತ್ತೆ ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು ರಜತಪದವಿಯನಿತ್ತು ವಿಜಯ ನೀ ಗೈದೆ 2 ಮಡದಿಮಣಿಯು ತಾನುಟ್ಟ ಪೀತಾಂಬರ ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ ಮೃಡನು ತಾನೇನು ಕೊಡಲೋ ಗೋವಿಂದಾ 3 ಜಗಜಟ್ಟಿ ಹನುಮನು ಬಗೆದು ನಿನ್ನಯ ದುಗುಡವ ಬಿಡಿಸಿದ ಬಗೆಯ ನೀನÀರಿತೂ ಜಗದೊಳು ಸರಿಯಾದುಡುಗರೆಯಿಲ್ಲದೆ ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4 ನಾನೆಂಬುದಲ್ಲದೆ ಏನುಂಟು ಎನ್ನೊಳು ನೀನೀವೆನಿದ ಮಾತ್ರ ಶ್ರೀನಾಯಕೇಶ ಏನನಾದರೂ ಸರಿ ನೀನೀಯೋ ಮುರವೈರಿ ನಾನು ನನ್ನದು ನಿನ್ನಧೀನ ಮಾಂಗಿರಿರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ನೀ ತಿಳಿದು ನೋಡೊ ಪ್ರಾಣಿ ಧ್ರುವ ನಿನ್ನ ನೀ ತಿಳಿಯೊ ನೀ ಭಿನ್ನಬೇದವಳಿದು ಚೆನ್ನಾಗ್ಯನುಭವದಲಿ ಉನ್ಮನವಾಗಿ 1 ನಾನಾರು ಎಂದು ನೀ ಖೂನ ತಿಳಿದು ನೋಡೊ ಘನ ಗುರು ಕೃಪೆಯಿಂದಲಿ ತನುವಿನೊಳು 2 ಎಲ್ಲಿಂದ ಬಂದ್ಯೊ ನೀ ಎಲ್ಲಿಗ್ಹೋಗುವಿ ಮುಂದೆ ಇಲ್ಲೆವೇ ತಿಳಿದು ನೋಡೊ ಸುಲಭದಿಂದ 3 ಬಂದೆ ನಾ ತಂದೆ ನಾ ಬಂದು ಘಳಿಸಿದೆ ನಾ ಹೊಂದಿಕಿ ಹೊಲಬು ನೋಡೊ ಸಂಧಿಸಿ ಘನ 4 ನಡೆದೆ ನಾ ನುಡಿದೆ ನಾ ಹಿಡಿದೆ ನಾ ಪಡೆದೆ ನಾ ಒಡನೆ ನಿನ್ನೊಳು ನೀ ನೋಡೊ ಪಿಡಿದು ನಿಜ 5 ತಾನೇನು ತನುವೇನು ತನ್ನೊಳಗಿಹುದೇನು ಮನಮುಟ್ಟಿ ಘನವ ನೋಡೊ ಚಿನ್ನುಮಯನ 6 ಏನುಂಟು ಏನಿಲ್ಲ ಅನಿಮಿಷದಲಿ ನೋಡೊ ಘನಕ ಘನವ ಬೆರೆದು ಸನ್ಮತವಾಗಿ 7 ಮರ ಹುಟ್ಟಿ ಮರಬಿದ್ದ ತೆರನಾಗದಿರೊ ನೀನು ಎರಗೊ ಶ್ರೀಗುರುಪಾದಕ ಕರಿಗಿ ಮನ 8 ಎಡಬಲ ನೋಡದೆ ಪಿಡಿದು ಸದ್ಗುರು ಪಾದ ಬೋಧ ನೋಡಿ ನಿನ್ನೊಳು9
--------------
ಕಾಖಂಡಕಿ ಶ್ರೀ ಮಹಿಪತಿರಾಯರು