ಏನಿದ್ದರೇನಯ್ಯಾ ಜ್ಞಾನವಿಲ್ಲದ ಮೇಲೆ ಪ
ದೀನರಕ್ಷಕ ನಿನ್ನ ಧ್ಯಾನ ಮಾಡದವನೆ ಅ.ಪ.
ಸತಿಸುತ ಬಾಂಧವರು ಬಹಳಿದ್ದರೇನು
ಗತಿ ಕಾಣಿಸುವರೇನೋ ದೇವರ ದೇವ
ಪತಿತಪಾವನ ನಿನ್ನ ಅತಿಭಕುತಿಯಿಂದ
ಸ್ತುತಿಸಿ ಹಿಗ್ಗದಂಥ ಪಾಮರ ಮನಿಜನೆ 1
ಕ್ಷೇತ್ರಮಾನ್ಯಗಳೇಸಿದ್ದರೇನು
ಪಾತ್ರೆ ಪದಾರ್ಥಗಳ್ ಗೃಹದಿ ತುಂಬಿದ್ದರೇನು
ಪಾತ್ರಂಗಳ ನೋಡಿ ದಾನಧರ್ಮಂಗಳ ಮಾಡಿ ಮಹ
ಯಾತ್ರೆಗಳ ಚರಿಸದೆ ಗಾತ್ರವ ಪೋಷಿಪಗೆ 2
ರಾಶಿ ವಿದ್ಯವಿರಲು ಅದರಿಂದ ಫಲವೇನು
ಕೋಶವು ಕೊರೆಯಿಲ್ಲದೆ ಇರುತಿರ್ದರೇನೊ
ವಿನುತ ಶ್ರೀ ರಂಗೇಶವಿಠಲನೊಳು
ಲೇಶ ಭಕುತಿಯಿಲ್ಲದ ಹೇಸೀಕೆ ಮನದವನೆ 3