ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಕ ಕಡೆದರೆ ಬೆಣ್ಣಿಲ್ಲಿಹ್ಯದೋ ಪ ಜೀವನ ಬಳಿಗ್ಹೋಗಿ ದೈನ್ಯಬಡುತ ಬಲು ಮಣಿದು ಬೇಡಲಲ್ಲೇನಿಹ್ಯದೋ ಅ.ಪ ಕಾಣದೆ ಬೊಗಳಿದರೇನಾದೋ ಒಣ ಗಾಣಾತರುವವಲಲ್ಲೇನಾದೋ ಕೋಣನ ಬಳಿಗ್ಹೋಗಿ ಸಾನುರಾಗದಿ ಒಳ್ಳೆ ವೀಣೆ ನುಡಿಸಲಲ್ಲೇನಾದೋ 1 ದೀನನ ಕಾಡಲು ಏನಾದೋ ಮಹ ಹೀನನ ಸೇರಿದರೇನಾದೋ ಜ್ಞಾನಬೋಧಾಮೃತ ಜಾಣತನದಿ ಅ ಜ್ಞಾನಿಗೆ ತೋರಿದರೇನಾದೋ 2 ಭಂಡರ ದಂಡಿಸಲೇನಾದೋ ಮಿಂಡೆ ಷಂಡನ ಕೂಡಿದರೇನಾದೋ ಮಂಡೆಬೋಳಿ ಮುಂದೆ ಗೊಂಡೆಮುತ್ತಿನ ಮಹ ದಂಡೆಯ ತಂದಿಡಲೇನಾದೋ 3 ಪಥ ಕೇಳೆಲೇನಾದೋ ಬಲು ದುರುಳ ಧರೆಯಾಳಿದರೇನಾದೋ ಕರುಣವಿಲ್ಲದ ಪರಮ ಪಾಪಿಗಳಿ ಗೆರಗಿ ಬೇಡಲಲ್ಲೇನಾದೋ 4 ಮಾನವ ಇಹ್ಯಮೆಚ್ಚಲಲ್ಲೇನಾದೋ ಮತಿ ಹೀನರ ಜಾಣತ್ವದೇನಾದೋ ಪ್ರಾಣೇಶ ರಾಮನ ಖೂನ ತಿಳಿಯದ ಮಾನವನಾದಲ್ಲೇನಾದೋ 5
--------------
ರಾಮದಾಸರು