ಒಟ್ಟು 9 ಕಡೆಗಳಲ್ಲಿ , 4 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾದರೇನು ಗುರು ಪಡದನಕಾ | ತಾನೊಲಿಯನು ಹರಿ ಕಾವನ ಜನಕಾ ಪ ಪರಿಪರಿಸಾಧನದಲಿ ಬಳಲುವರೆ | ಪರಸ ಮುಟ್ಟದೆ ಲೋಹವಾಗುವದೇ ಕನಕಾ1 ಪತಿತೋದ್ಧಾರಗುರು ಸ್ವಸುಖದಾನಿ | ವೃತ ತಪಸಿದ್ಧಿಯ ಬಹು ಸುಖ ಕ್ಷಣಿಕಾ2 ಗುರು ಮಹಿಪತಿಪ್ರಭು ಜ್ಞಾನಾಂಜ ನಿಡದೇ | ಧರೆಯೊಳಾಹನೇ ನರ ಚಿದ್ಘನ ಧನಿಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾದರೇನು ಗುರುದಯ ಪಡದನಕಾ| ತಾನೊಲಿಯನು ಹರಿ ಕಾವನ ಜನಕಾ ಪ ಪರಿ ಸಾಧನದಲಿ ಬಳಲುವರೇ| ಪರಸ ಮುಟ್ಟದ ಲೋಹವಾಗುವದೇ ಕನಕಾ 1 ಪತೀತೋದ್ದರ ಗುರು ಸ್ವಸುಖದಾನಿ| ವೃತ ತಪದಿ ಸಿದ್ದಿಯ ಬಹ ಸುಖ ಕ್ಷಣಿಕಾ2 ಗುರು ಮಹಿಪತಿ ಪ್ರಭು ಜ್ಞಾನಾಂಜನಿಡದೇ| ಧರಿಯೊಳಾಹನೇ ನರ ಚಿದ್ಬನ ಧನಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾದರೇನು ಪ ತನು ವೈರಾಗ್ಯದಲ್ಲಿಟ್ಟನವರತಾ | ಅಣಿಮಾ ಸಿದ್ಧಿ ಅರತಾ | ಘನಗುರು ಜ್ಞಾನವಾ ಮರತು 1 ಓದಿಕಿಯಲಿ ನಿಪುಣಾದವನು ಯಲ್ಲಾ | ವೇದಾರ್ಥ ಮಾಡಬಲ್ಲಾ ಸಾಧುರಾ ಮಾರ್ಗವೆ ತಿಳಿಲಿಲ್ಲಾ 2 ಗುರು ಮಹಿಪತಿ ಸುತ ಪ್ರಭುವಲಿಯದೆ | ಪರಗತಿ ಸಾಧಿಸುವದೆ | ಬರೆ ವ್ಯರ್ಥಡಂಭದಿ ಮೆರೆವುದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ ಪÀ ವೇದ ಓದಿದರೇನು ಶಾಸ್ತ್ರ ನೋಡಿದರೇನು | ಕಾದಿ ಕಾದಾಡಿ ಗೆದ್ದರೇನು | ಜ್ಞಾನವಿಲ್ಲದೆ 1 ಕಾನನ ಸೇರಿದರೇನು | ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ 2 ಜಪತಪ ಮಾಡಲೇನು, ಜಾಣತನ ಮೆರೆದರೇನು | ವಿಜಯವಿಠಲನ ಸಾರಿದರೇನು, ಜ್ಞಾನವಿಲ್ಲದೆ 3
--------------
ವಿಜಯದಾಸ
ಕೋಪ ಮಾಡುವರೆ - ಕೃಪಾಳು ನೀನು ಕೋಪ ಮಾಡುವರೆ ಪ ಕೋಪ ಮಾಡುವರೇನೋ ಸಂಸøತಿ ಕೂಪದೊಳು ಬಿದ್ದ್ಹೊರಳುತಿಹನ ನೀ ಪರಾಮರಿಸಿನ್ನು ಕೀರ್ತಿ ಕ- ಲಾಪವನು ಕಾಪಾಡಿಕೊಳ್ಳದೆ ಅ.ಪ. ನಾಥನು ನೀನು ಎಂದೆಂದಿಗೂ ದೂತನು ನಾನು ಸಿದ್ಧಾಂತವು | ನೀತವಿದಿನ್ನು ಕೋತಿ ಕುಣಿವುದು ಕೊರವ ಕುಣಿಸಿದ ರೀತಿಯಲಿ ಜಗತೀತಳದಿ - ವಿ ಖ್ಯಾತಿಯಲ್ಲವೆ ಮಾತು ಪುಸಿಯೇ ನೀ ತಿಳಿದು ಕರುಣಿಸದೆ ಬರಿದೆ 1 ಅರಿತವ ನೀನು - ಷಡ್ವರ್ಗದಿ ಬೆರತವ ನಾನು - ಚರಣಂಗಳಿಗೆರಗುವೆನಿನ್ನು ಅರಿತು ನೆನೆಯೆ ಪ್ರಪನ್ನರೊಮ್ಮೆಗೆ ಎರವು ಮಾಡದೆ ಪೊರೆವೆನೆಂಬುವ ಬಿರುದನುಳಿದು ಕರುಣವಿಲ್ಲದೆ ಮರೆಯ ಹೊಕ್ಕವರೊಡನೆ ಕೆರಳಿ 2 ಏನಾದರೇನು - ನೀನಲ್ಲದೆ ಪ್ರಾಣ ಸತಿಸುತ ದ್ರವ್ಯ ಮಾನಪ- ಮಾನ ಅಭಿಮಾನಗಳು ನಿನ್ನವು ದೀನ ಜನ ಮಂದಾರ ಗುಣಗಳ ಪೂರ್ಣ ಲಕ್ಷ್ಮೀಕಾಂತ ಪ್ರಭುವೆ 3
--------------
ಲಕ್ಷ್ಮೀನಾರಯಣರಾಯರು
ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ1 ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ 2 ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ ಅಖಿಳ ನೀನಾವದಿತ್ತದೇ ಬಲು ಲೇಸು 3 ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ | ನಾನು ವ್ಯಧಿಕರಣ ಪೇಳಿದರಾಯಿತೆ | ಆನಂದಕೆ ಹ್ರಾಸ ಬರುವುದೆ ಶಾಶ್ವತ | ಏನಾದರೇನು ನೀನಾಡಿದಾಟವೆ ಸಮ್ಮತ | 4 ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ | ಉತ್ತಮಾ ಪದ ಉಂಟು ಪುಶಿಯಲ್ಲವೋ | ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ | ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
--------------
ವಿಜಯದಾಸ
ಸುಮ್ಮನೆ ಗತಿಯ ಬಯಸಿದರಾಹುದೇ | ಹಮ್ಮ ನೀಗಿ ಕ್ಷಿತಿಯೊಳು ವಮ್ಮನವಾಗಿ ನಿಲ್ಲದೇ ಪ ಭಕುತಿಯಂಕುರವಿಲ್ಲಾ ಯುಕುತಿ ಸಾಧನವಿಲ್ಲಾ | ಮುಖದಲಿ ಸ್ತುತಿ ಸ್ತವನಗಳಿಲ್ಲಾ | ಪ್ರಕಟದಿ ಶೋಡಷ | ಸುಕಲೆಯಾರ್ಚನೆಯಿಲ್ಲಾ | ಅಕಳಂಕ ದೇವ ನಂಬುಗೆ ದೃಢ ವಿಡಿಯಲಿಲ್ಲಾ 1 ವೇದ ಪುರಾಣವನು ಓದಿ ಕೇಳಿದರೇನು | ವಾದಗುಣದಿ ಹಿಂಗಲಿಲ್ಲಾ ತಾನು | ಸಾಧಿಸಿಕೊಳ್ಳದೇ | ಸಾಧುರ ಬೋಧವನು | ಗಾರ್ದಭ ಚಂದನ ಹೊತ್ತಂತೆ ಏನಾದರೇನು 2 ಗುರುಪಾದಕೆರಗದೆ | ಗುರುಮಾರ್ಗವರಿಯದೆ | ಮೊರೆವಾರು ಅರಿಮದವ ಮುರಿಯದೇ | ಪರವಸ್ತು ಇದೆಯೆಂದು | ನರಭಾವ ಮರೆಯದೆ | ಗುರುಮಹಿಪತಿ ಸುತ ಪ್ರಭು ಗುರುತ ದೋರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||ಶರಣು ನಿನ್ನಯ ಪದಸರಸಿಜಯುಗಗಳಿಗೆ |ಎರವುಮಾಡದೆ ಕಾಯೊಪರಮದಯಾಳು ಪದಾತಾಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ 1ದೋಷರಹಿತ ಯನ್ನಕ್ಲೇಶಹಿಂಗಿಸೊ ಸಂ |ನ್ಯಾಸಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿಮಾಡದೆ ರವಿಭಾಸ ಗುಣಾಢ್ಯ 2ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳುಮಾನನಿನ್ನದು ಕೇಳು ||ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ 3
--------------
ಪ್ರಾಣೇಶದಾಸರು
ಜಲಧಿತಕ್ಕದೊ ನಿನ್ನಳಿಯಗೂ ನಿನಗೂ |ಹಲವು ಬಗೆಯಿಂದಲಿ ಪರೀಕ್ಷಿಯನು ಮಾಡಿದರೆ ಪಮೊದಲೆ ತಿಳದಷ್ಟು ನಿನ್ನ ಮಹತ್ಮಿ ವರ್ಣಿಸುವೆ |ತುದಿಗಂಡು ಬಲ್ಲೆನೇ ಅಧಮ ನಾನೂ ||ಎದುರಿಗಂಬುವದಾಡಿಕೊಂಡ ಬಗೆ ಬ್ಯಾರೆಲ್ಲೀ |ಮುದದಿಂದ ದಯಮಾಡಿ ಕೇಳೊ ರತ್ನಾಕರನೇ 1ನಿನ್ನಿಂದ ಹುಟ್ಟಿಹುದು ವಿಷವು, ಗುರುವಿನ ಪತ್ನಿ |ಯನ್ನು ಸ್ವೀಕರಿಸಿದನು ನಿನ್ನ ಮಗನೂ ||ಘನ್ನತರ ಮಕರಾದಿಗಳು ನಿನ್ನ ಪರಿವಾರ |ಇನ್ನೆಷ್ಟು ಪೇಳಲಿ ಚರಿತ್ರ ಪಾರಾವಾರ 2ನಿನ ಒಡಲಿಗೆಷ್ಟಾದರನ್ನ ಸಾಕೆನಿಸದೂ |ದಣಿದು ಬಂದವರಿಗಾಶ್ರಯವು ಕಾಣೇ ||ಉಣಲಿಕ್ಕೆ ಅನ್ನೆಂಬದೆಂಟನೆ ರಸದಂತೆ |ಘನಖ್ಯಾತಿ ದೂರದಲಿ ಬಳಿಗೆ ಬರಲಿಂತಿಹದು 3ಪ್ರೀತಿಯಂ ಬಂದವರು, ಗ್ರಹಣ ವೈಧೃತಿ ವೇತೀ |ಪಾತದಲಿ ನಿನ ದರುಶನಾಗಬೇಕೂ ||ಭೂತ ಬಡದವರಂತೆ ನಿನ್ನ ಕಲ್ಲುಗಳಿಂದ |ಘಾತಿಸಲಿ ಬೇಕು ನೋಡಲ್ಕೆ ಬಹು ಸೋಜಿಗವು 4ತುಳಿದದಕೆ ಹಿಗ್ಗಿದಿಯೋ ಬಹುಮಾನಿ ನೀನೆಲವೊ |ಲಲನಿ ಹಡದೇಳು ಶಿಶುಗಳ ಕೊಂದಳೂ ||ಬಲುಭಂಟಹಿರಿಯಮಗಗರಸುತನ ಕೊಡಲಿಲ್ಲ |ಇಳಿಯೊಳಗೆ ನೀ ಮಾಡಿದನ್ನ್ಯಾಯಕೆಣಿಯುಂಟೆ 5ಸತಿಸಂಗ ಬಿಡಲೊಲ್ಲಿ ಪರ್ವಕಾಲಗಳಲ್ಲಿ |ಸುತಗೆ ಕಡಿಮೆದರಿಂದೆ ಆದಿ ಹ್ಯಾಗೊ ||ಪತಿವ್ರತಾ ಮಗಳಾದಳೊಂದೆ ಸುಗುಣದರಿಂದೆ |ಕ್ಷಿತಿಯೊಳನವರತ ಪೂಜಿಸಿಕೊಂಬಿ ಜನರಿಂದ 6ಜಾಮಾತನಿಗೆ ಇಹವು ಮುಖವು ಹತ್ತೊಂಬತ್ತು |ಆ ಮಧ್ಯ ಗಜಲಪನದಂತೆ ಒಂದೂ ||ಭೂಮಿಯೊಳಗಾಶ್ಚರ್ಯ ತಾನೆ ಮಕ್ಕಳ ಪಡೆವ |ಈ ಮಗಳು ಬಹುಸುಖವ ಬಡುವಳಿವನಿಂದಲ್ಲಿ 7ಬೆರಳು ಚೀಪುವನೋಡುಸುಳ್ಳಲ್ಲ ದಾನ |ಪುರುಷ ಬದುಕುವ ಚೋರತನದಿ ಜಾರಾ ||ತರುಣಿಯಾಗಿದ್ದ ನಿನ ಬಳಿಯಲ್ಲಿ ನೀ ಬಲ್ಲಿ |ತುರುಗಾಟವ ಕೊಡಲಿ ಕೊಂಡಡವಿಯೊಳಗಿರುವ 8ಗುರುಸ್ವಾಮಿ ಪಿತ ಬ್ರಹ್ಮ ವಂಶದ್ರೋಹಿಗಳವನ |ಪರಿವಾರ ಮಕ್ಕಳಿಗೆ ಮಾವನಾದಾ ||ಉರುಗ ಶಯನಂಡಜಾಧಿಪ ವಹನ ನೀಲಾಂಗ |ಅರಿತನೃಪಋಷಿಗಳೊಳಗೊಬ್ಬರಿಗ್ಯು ಮಗನಲ್ಲ 9ಕುಲಸೂತ್ರವಿಲ್ಲ ಒಂದೇ ರೂಪನಲ್ಲ ನಿ- |ಶ್ಚಲನಲ್ಲ ವತಿ ಕಠಿಣ ವಕ್ರವದನಾ ||ಬಲು ಕೋಪಿ ತಿರದುಂಬ ಸ್ತ್ರೀಯರಿಬ್ಬರ ಕೊಂದ |ಅಲವಜಾರನು, ಬತ್ತಲಿರುವ, ಕಲಹಕೆ ಪ್ರೀಯ 10ಕೊಟ್ಟೆಲ್ಲ ಅವನಿಗೀ ಕನ್ನಿಕಿಯ ಸವತಿಯರು |ಎಷ್ಟೋ ಮಲಸುತರಿಹರದಕೆ ದಶ ಮಡೀ ||ಸಿಟ್ಟಾಗ ಬ್ಯಾಡವನ ವಾರ್ತಿ ಕೇಳಲು ಜನರು |ಬಿಟ್ಟು ಸಂಸಾರವೆಂದಿಂದಿಗೊಲ್ಲದಿಹರೂ 11ನಿನ್ನ ಮಗಳವನಿತ್ತವನ ಮಗಳ ಮದಿವ್ಯಾದಿ |ಕನ್ಯ ವಿಕ್ರಯ ಪರಸ್ಪರವೆನಿಸಿತೂ ||ಇನ್ನೇಸೊ ನಿಮ್ಮ ನಿಮ್ಮಲ್ಲಿದ್ದ ನಡತಿಗಳು |ಅನ್ಯರಿದುಕೇಳಿಭಜಿಸರೊ ಶುದ್ಧ ಭಕುತಿಯಲೀ 12ಏನಾದರೇನು ಶ್ರೀ ಪ್ರಾಣೇಶ ವಿಠಲನಿಗೆ |ನೀನೆಗತಿನಿರ್ದೋಷ ವಸ್ತುವೆಂದೂ ||ಶ್ರೀನಳಿನಭವಮುಖರುನಿತ್ಯವಂದಿಸುತಿಹರೊ |ನೀನವನ ಮಾವನಾದಿನ್ನು ಪೂಜಿತನಲ್ಲೆ 13
--------------
ಪ್ರಾಣೇಶದಾಸರು