ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾದರೇನಲ್ಲಿ ಇರಕೂಡದು ಹೋಗಿ ಆನಂದ ಕಾನನದೊಳಿರೆ ಸುಖವದು ಪ ನರಮನುಜರೊಳಗಿಲ್ಲಿ ಜನಿಸಿಭೂತಳಕೆಲ್ಲ ದೊರೆಯೆನಿಸಿ ಭೋಗ ಪಡಿಸುವುದರಿಂದಲು ಮಣಿ ಕರ್ಣಿಕೆಯ ಸರಸಿಯೊಳು ಚರಿಸಿ ಮಡಿದರೆ ಮುಕ್ತಿಯಹುದು 1 ಕೊಕ್ಕದಲಿ ವನಿತೆ ಮನೆಮಕ್ಕಳಲಿ ಪಶುಗಳಲಿ ಹೆಕ್ಕಳದೊಳಿಲ್ಲಿ ಸಾವುದರಿಂದಲು ಹೊಕ್ಕು ಮನೆ ಮನೆ ಬಿಡದೆ ಕಾಶಿಯಲಿ ತಿರಿದುಂಡು ಡೊಕ್ಕೆಯನು ಬಿಡೆ ಮೋಕ್ಷ ಪದವಿಯಹುದು 2 ಹರಿ ಸುತನ ಕೋಣೆ ಲಕ್ಷ್ಮೀಪತಿಯ ಪಾದ ಸರಸಿರುಹದಲಿ ಜನಿಸಿರ್ದ ಜಾಹ್ನವಿಯಲಿ ನರ ಮುಳುಗಿ ಕಾಶಿ ವಿಶ್ವೇಶ್ವರನ ಸನ್ನಿಧಿಯೊಳೊರಗಿದರೆ ಮರಳೆ ಜನ್ಮಕೆ ಬಾರೆನೋ 3
--------------
ಕವಿ ಪರಮದೇವದಾಸರು