ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಡ ದೈವಗಳ ಪೂಜೆಯನು ಮಾಡಿದರೆ | ಕೇಡಲ್ಲದೆ ಮತ್ತೆ ಕೈವಲ್ಯವುಂಟೇ ಪ ಕೊಳಚಿ ನೀರನು ದಾಟಲರಿಯದ ಮನುಜಗೆ ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- | ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು | ಅಳಿಯದಂತೆ ದಡಕೆ ತರಬಲ್ಲನೇ 1 ಕತ್ತಲೆಗಂಜುವನ ಕರೆತಂದು ಶೃಂಗರಿಸಿ | ಉತ್ತಮದ ವಾಜಿವಾಹನವ ಮಾಡಿ || ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- | ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ 2 ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- | ಮನ ವಿಡಿದು ಭಜಿಸಿದರೆ ಏನಾಗದೊ || ಬಿನಗು ದೈವರಗಂಡ ಶ್ರೀ ವಿಜಯವಿಠ್ಠಲನ | ವನಜಪದ ನೆನೆದರೆ ಮುಕುತಿಯುಂಟು 5
--------------
ವಿಜಯದಾಸ