ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಾಧವೆಣಿಸದಲೆ ಕಾಯಬೇಕು ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ಪ ನೀ ಮಾಡಿದುಪಕಾರ ನಾ ಮರೆವುದೆಂತೋ ಲ ಕ್ಷ್ಮೀ ಮನೋಹರನ ನಿಜದಾಸಾಗ್ರಣೀ ಪಾಮರನ ಲೋಕದೊಳು ಧೀಮಂತನೆನಿಸಿದೆ ಮ ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದೂ 1 ಅವಿವೇಕಿ ನಾನು ನಿನ್ನವನೆಂದು ತಿಳಿದು ಎ ನ್ನವಗುಣಗಳೆಣಿಸದೆ ನಿತ್ಯದಲ್ಲಿ ಸುವಿವೇಕಿಯನೆ ಮಾಡು ಕವಿವರ್ಯ ತವ ಮನೋ ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ 2 ಏನರಿಯದ ಮೂಢ ಮಾನವನು ನಾನು ಸು ಜ್ಞಾನವರ್ಯನು ನೀನೆ ಕಾಯಬೇಕು ಮಾನುತ ಜಗನ್ನಾಥ ವಿಠಲನ ಪದಯುಗಳ ಸ ಧ್ಯಾನ ಮಾಡುವ ಧೀರಪ್ರಾಣ ಪಂಚಕರಾಯ 3
--------------
ಜಗನ್ನಾಥದಾಸರು
ಆವ ಜನುಮ ಸಖನೇ ನಮ್ಮಯ್ಯಾ ಪ ಅವಿದ್ಯ ಬಲಿಯೊಳು ಸಿಲುಕಿ ಬಳಲುವನ | ಸುವಿದ್ಯ ನೋಟದ ಕರುಣವ ಬೀರಿದನಾ1 ಏನರಿಯದಲಿರೆ ವಿಷಯ ಮದಾಂಧದಿ | ಜ್ಞಾನಾಂಜನವ ಮಾಡಿ ಕಂಗಳದೆರಿಸಿದನಾ 2 ಹೃದಯ ಭೂಮಿಗೆ ಹರಿ ನಾಮಬೀಜವ ಬಿತ್ತಿ | ಸದಮಲ ಭಕುತಿಯ ಬೆಳೆಗಳ ನುಣಿಸಿದನಾ 3 ಕೇಳದ ನುಡಿಗಳ ಹೇಳುತ ಕಿವಿಯೊಳು | ಕಾಲ ಕಾಲಕ ಎನ್ನ ಹಿತವನೆ ಯೋಜಿಪನಾ4 ತಂದೆ ಮಹಿಪತಿ ಕಂದನೆನಿಸಿತ್ತ ನಾ | ಪರ ಭಾಗ್ಯವ ನೀಡಿದನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾನ್ಯಾರೋ | ಶ್ರೀಹರಿ ಪೇಳೋ ನಾನ್ಯಾರೋ ಪ ನಾನ್ಯಾರೆಂಬುದ ಪೇಳಿ ನೀನ್ಯಾರೆಂಬುದ ತಿಳುಹಿ ಸಾನುರಾಗದಿ ಪೊರೆವ ಪ್ರಭು ನೀನೆ ಬೇರಿಲ್ಲಅ.ಪ. ಎಲ್ಲಿಂದ ಬಂದೆ ನಾನಿಲ್ಲಿಗೆ ಮುಂದೆಲ್ಲಿಗೆ ಪಯಣ ಕೊಂಡೊಯ್ಯುವುದೇನೆಂಬುದರಿಯೆ1 ಜನನಗೊಂಡು ಮಾನುಷ ದೇಹ ತಳೆದನಾ ನೆನಗೆ ಹಿತವಹ ಕಾರ್ಯವನೇನನೆಸಗಿದೆ 2 ದೇಹವೆ ಮನಸೆ ಬುದ್ಧಿಯೇ ನಾನೆಂಬುದನಾರೆಂದರಿಯೆ ನೇಹದಿಂದಿರುವಂತರಾತ್ಮ ತೊಲಗಲು ಮುಂದೀ ದೇಹವು ಕಸಕಿಂತ ಕಡೆಯೆನಿಪುದ ಬಲ್ಲೆ 3 ಕರ್ಮಿ ಜೀವನು ನೀ ಸಾಕ್ಷಿ ನಿರ್ಲಿಪ್ತನು 4 ಏನರಿಯದಲ್ಪನ ಕೈಬಿಡದಿರು ನೀನೆ ಗತಿ ರಘುರಾಮವಿಠಲ ತಂದೆ 5
--------------
ರಘುರಾಮವಿಠಲದಾಸರು
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು