ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಾನಂದದ ಸಭಾ ಮಧ್ಯದಲಿಸುಮ್ಮನೆ ಇರುತಿಹುದೇನಮ್ಮಬ್ರಹ್ಮಾದಿಗಳಿಗೆ ದೂರಾಗಿಹನಿರ್ಮಲ ನಿರುಪಮ ತಾನಮ್ಮ ಪ ಹೇಳಲು ಬಾರದ ಸುಖರೂಪದಲಿಹೊಳೆಯುತ ಅಹುದು ಏನಮ್ಮಮೇಳದ ಲೋಕಕೆ ಕರ್ತೃ ತಾನಾಗಿಹಲೋಲ ಪರಾತ್ಪರ ತಾನಮ್ಮ 1 ಬೋಧದ ರೂಪದಿ ಹಾ.... ಎಂಬಂದದಿಬೆಳಗುತಲಿಹುದದು ಏನಮ್ಮಆದಿ ಅನಾಧಿಯು ಅವ್ಯಕ್ತವೆನಿಪಅಚಲಾನಂದವೆ ತಾನಮ್ಮ 2 ತೃಪ್ತಾನಂದದಿ ತೂಷ್ಣೀ ಭಾವದಿದೀಪ್ತವಾಗಿಹುದದು ಏನಮ್ಮಸಪ್ತಾವರಣದ ಮೀರಿ ಮಿಂಚುವಗುಪ್ತಜ್ಞಪ್ತಿಯು ತಾನಮ್ಮ 3 ಕದಲದೆ ಚೆದುರದೆ ಕೈ ಕಾಲಿಲ್ಲದೆಉಕ್ಕುತಲಿಹುದದು ಏನಮ್ಮಸದಮಲ ಸರ್ವಾತ್ಮತ್ವವೆಯಾಗಿಹಸಾಕ್ಷೀಭೂತವು ತಾನಮ್ಮ4 ತೋರುತಲಡಗದ ಸಹಜಭಾವದಿಥಳಥಳಿಸುತಿಹುದದು ಏನಮ್ಮಕಾರಣ ಕಾರ್ಯವ ಕಳೆದ ಚಿದಾನಂದಕಾಲಾತೀತನು ತಾನಮ್ಮ 5
--------------
ಚಿದಾನಂದ ಅವಧೂತರು