ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಮಣಾ ಹರಿ ಗೋವಿಂದಾ ಬಾರೋ ಕೊಂಡಾಡಿ ಪಡೆವೆನಾನಂದ ಪ ನಾರದಾದಿ ಮುನಿ ಬೃಂದಾನಂದ ಬಾರೋ ಭಕ್ತಕುಮುದೇಂದು ಮುಕುಂದಾ ಅ.ಪ ನಾನಾ ಜನುಮಗಳೊಳಗುದಿಸಿದೆವಯ್ಯ ಏನೆಂದು ಪೇಳಲಿ ನಿನಗೆ ಜೀಯ ನೀನೆನಗಿತ್ತಾ ತನುಗಳನಳೆಯಲು ಏನಪೇಳಲೈ ಭೂಮಿಗೆ ನಾಲ್ಮಡಿ ಸಾನುರಾಗದಿ ಜನನಿಯಿತ್ತಾ ಘೃತ ಪಾನಕ್ಷೀರ ವಾರಿಧಿಗಿಮ್ಮಡಿಯೋಳ್ ಬಾ 1 ನೋಡಿ | ಮನಕರಗದೆ ರುಕುಮಿಣಿ ರಮಣಾ ಮೃಡ ವಂದಿತ ಸರಸಿಜ ಚರಣಾ ಪಾಡೀ ಕೊಂಡಾಡುತಿರ ದೇಕೆ ನಿಷ್ಕರುಣಾ ಬೇಡಿದರ್ಗೆ ಕೈನೀಡುತೆ ದಾನವ ಮಾಡಲಿಲ್ಲವದರಿಂದ ದರಿದ್ರತೆ ಪೀಡಿಸವೈ ನಾ [ಮಾಡಿದ] ಪಾತಕವಾರ್ಜಿಸಿ ಜನುಮಂಗಳ ಪಡೆದೆನೊ ಬಾ 2 ಸುನಾಮ ನಮಿಸುವೆ ಸುಗುಣ ವಿರಾಮ ಸನ್ನುತ ವರಮಾಧವ ಕೋಮಲಾಂಗ ಸೋಮಶೇಖರಾಧಿಪ ಸುಮಚರಣವ ನೋಳ್ಪೆನೋ ಬಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್