ಒಂದು ಮೂರುತಿಯಲ್ಲಿ ಹರಿಹರದೇವರಿಬ್ಬರು
ಬಂದು ನೆಲೆಗೊಂಡುದನ ಕಂಡೆನದ್ಭುತವ ಪ.
ಭಾವಜನಪಿತನೊಬ್ಬ ಅವನ ಕೊಂದವನೊಬ್ಬ
ಹಾವ ತುಳಿದವನೊಬ್ಬ ಧರಿಸಿದವನೊಬ್ಬ
ಗೋವ ಕಾಯಿದನೊಬ್ಬ ಅದನೇರಿದವನೊಬ್ಬ
ಭಾವಿಸಲು ವಿಪರೀತಚರಿತರಂತಿರ್ದು1
ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬ
ದಾನವರ ರಿಪುವೊಬ್ಬ ವರವೀವನೊಬ್ಬ
ಏನನೆಂಬೆನೊ ಜಗವ ಕಾವುತಿಹನೊಬ್ಬ ನಿ-
ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ 2
ಯಾಗ ಪಾಲಕನೊಬ್ಬ ಯಾಗಭಂಜನನೊಬ್ಬ
ನಾಗರಕ್ಷಕನೊಬ್ಬ ನಾಗಶಿಕ್ಷಕನು [ಒಬ್ಬ]
ಈಗ ನಲ್ಲಳಿಗÀರ್ಧದೇಹವನಿತ್ತ ಶಿವನಂತೆ
ಭೋಗದೊಳು ಹೊಂದಿಹ ಹಯವದನ ಬಲ್ಲ 3