ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(38ನೇ ವರ್ಷದ ವರ್ಧಂತಿ) ದಯಾನಿಧೆ ಪರಿಪಾಲಯ ಮಾಂ ಪ. ಮಾನುಷತ್ವವು ಬಂದ ಸಮಯದಿ ಹೀನ ಭೋಗವೆ ಬಯಸಿದೆ ನಾನು ನನ್ನದು ಎಂಬ ಕೀಳಭಿ- ಮಾನವೇ ನಾ ವಹಿಸಿದೆ ಏನನೆಂಬೆನು ಎನ್ನ ಬುದ್ಧಿವಿ- ಹೀನತೆಯ ಬಯಲಾಸೆ ಬಿಡಿಸು 1 ಇಳೆಯೊಳಿರುತಿಹ ನಿನ್ನ ಮಹಿಮೆಯ ತಿಳಿಯದಾದೆನು ಮೋಹದಿ ಕಳೆದೆ ಮೂವತ್ತೆಂಟು ವತ್ಸರ ಹಲವು ವಿಷಯದಿ ಚೋಹದಿ ಕಲಿಮಲಾಪಹ ಕೃಪಾಳು ನಿನ್ನಯ ನೆಲೆಯನರಿಯದೆ ನೊಂದೆನಲ್ಲೊ 2 ಆಸ್ಯದಲಿತ್ವನ್ನಾಮ ನುಡಿಸುತ ದಾಸ್ಯವನು ದಯ ಮಾಡುತ ಹಾಸ್ಯ ಮಾಳ್ಪರ ಹಲ್ಲ ಮುರಿದು ವಿಲಾಸ್ಯ ಮತಿ ಕಾಪಾಡುತ ಪೋಷ್ಯ ಪದವನು ನೀಡು ಲಕ್ಷ್ಮೀ- ವಾಸ್ಯ ವಕ್ಷನ ವೆಂಕಟೇಶ3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದ್ರಲೋಕವ ಪೋಲ್ವ ದ್ವಾರಕೆಯಿಂದ ನಮ್ಮನು ಸಲಹಲೋಸುಗಸಿಂಧುವಿನ ಮಾರ್ಗದಲಿ ತೌಳವ ಜನರ ದೇಶಕ್ಕೆಬಂದು ಮಧ್ವಾಚಾರ್ಯರ ಕೈ-ಯಿಂದ ಪೂಜೆಯಗೊಂಬ ಕೃಷ್ಣನಮಂದಹಾಸದ ಮುದ್ದುಮೊಗ ಸೇವಿಪಗೆ ಸಂಪದವು1 ಪಾದ ಮನೋಹರೋರುದ್ವಂದ್ವ ಶ್ರೀಕೃಷ್ಣನ ಮೂರ್ತಿಯ ನೋಳ್ಪರ ನಯನ ಸುಕೃತಫಲ2 ನಿತ್ಯದಲಿ ಗೋಘೃತದ ಮಜ್ಜನಮತ್ತೆ ಸೂಕ್ತ ಸ್ನಾನ ತದನು ಪ-ವಿತ್ರ ಮಂತ್ರ ವಿಚಿತ್ರ ತರವಹ ಕಲಶದಭಿಷೇಕವಸ್ತ್ರಗಂಧ ವಿಭೂಷಣಂಗಳವಿಸ್ತರಿಪ ಶ್ರೀತುಲಸಿ ಪುಷ್ಪದಿಭಕ್ತಿಭರಿತರು ಮಾಡುವಾರಾಧನೆಯನೇನೆಂಬೆ 3 ಸುತ್ತ ಸುಪ್ತಾವರಣದರ್ಚನೆವಿಸ್ತರಿಪ ಸ್ತೋತ್ರಗಳ ಗಾನ ವಿ-ಚಿತ್ರರ ನೈವೇದ್ಯವು ಸುವೀಳೆಯ ಧೂಪ ದೀಪಗಳುರತ್ನದಾರ್ತಿಗಳ ಸಂಭ್ರಮಛತ್ರ ಚಾಮರ ನೃತ್ಯಗೀತಾ-ದ್ಯುತ್ಸವಗಳೊಪ್ಪಿಹವು ದೇವನ ಮುಂದೆ ದಿನದಿನದಿ 4 ಅಪ್ಪಮೊದಲಾದಮಲ ಭಕ್ಷ್ಯವತುಪ್ಪ ಬೆರೆಸಿದ ಪಾಯಸವ ಸವಿ-ದೊಳ್ಪ ಶಾಕಗುಡಂಗಳನು ಕಂದರ್ಪನಪ್ಪನಿಗೆಅರ್ಪಿಸುವರನುದಿನದಿ ರಸ ಕೂ-ಡಿಪ್ಪ ಪಕ್ವಫಲಾದಿಗಳು ರಮೆಯಪ್ಪಿಕೊಂಡಿಪ್ರ್ಪಚ್ಯುತಗೆ ಪೂಜಿಸುವ ಯೋಗಿಗಳು 5 ಸಿರಿ ನೆಲಸಿಹುದು ಶ್ರೀಕೃಷ್ಣನ ಮನೆ ಶೃಂಗಾರ 6 ಶುಭ ವಾಕ್ಯಗಳ ನಮಗೆನಿಷ್ಠಸುಜನರು ತಟ್ಟನೆ ಮನ-ಮುಟ್ಟಿ ನೆನೆವರಿಗಿಷ್ಟ ಅಖಿಳವಕೊಟ್ಟು ಸಲಹದೆ ಸೃಷ್ಟಿಯೊಳು ನೀಗಿಪ್ಪೊ ಗುಣಪುಷ್ಪ 7 ಏನನೆಂಬೆನು ಕೃಷ್ಣ ದೀನರ ದೊರೆಯು ನೀನೆಂದಾದ ಕಾರಣಮಾನವರ ಸುರಧೆÉೀನುತನ ನಿನಗಿಂದು ಸೇರಿತಲಹೀನತೆಯ ಪರಿಹರಿಸಿ ಭಾಗ್ಯಾಂಭೋನಿಧಿಯೆ ನಿಜರ್ಗೀವ ನಿನ್ನ ಮ-ಹಾನುಭಾವದ ಬಲುಮೆಗೆಣೆಗಾಣೆನು ಮಹಾಪ್ರಭುವೆ 8 ಭಾಪು ದಿವಿಜರ ದೇವರಾಯನೆಭಾಪು ಭಜಕರಅಭೀಷ್ಟವೀವನೆಭಾಪು ಹರಿನೀಲೋತ್ಪಲನೆ ಶ್ಯಾಮಲನೆ ಕೋಮಲನೆಭಾಪು ಹಯವದನಾಖಿಲೇಶನೆಭಾಪು ಸುಜನರ ಪಾಪ ನಾಶನೆಭಾಪು ಕೃಷ್ಣಾಲಸತ್ರೈಪಾಲಕನೆ ಬಾಲಕನೆ 9
--------------
ವಾದಿರಾಜ
ಕಂಬುಕಂಧರ ಹರಿಯಪ. ಪಾಲಿತ ಕೌಂತೇಯ ಭಾಗವತ ತನಕಾಗಿ ತಾ ದಯವಗೈದ ಭರದಿಂದ ತೋರ್ವ ಭೋಗಿಶಯನ ಸ- ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ1 ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟು ಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದು ನಿಂದು ವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿ ದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು2 ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನು ದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನು ಸೂಸಿ ಕರುಣಾರಾಸ ರಾಜ್ಯದ ವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ3 ಸುಖದಿಂ ಬಾಳುವದು ಪರಿಯ ನೀನರಿಯಾ ನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿ ಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ4 ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವ ಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವ ಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳ ಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ನಂಬಿರೈ ಕರುಣಾಂಬುಧಿ ಕೋಮಲಕಂಬುಕಂಧರಹರಿಯಪ.ಯೋಗಿಮನಮುದ ರಾಗ ಮೂರುತಿಯ ದೊರೆಯಪಾಲಿತ ಕೌಂತೇಯಭಾಗವತತನಕಾಗಿ ತಾ ದಯವಗೈದ ಭರದಿಂದ ತೋರ್ವಯೋಗ ಮಾಯಾಧೀಶ ಸತ್ಸಕಲಾಗಮಾರ್ಚಿತಭೋಗಿಶಯನಸ-ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ 1ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟುಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದುನಿಂದುವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು 2ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನುದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನುಘಾಸಿಯಾಗದೆ ಧನಿಯ ಹಣವನುಸೂಸಿ ಕರುಣಾರಾಸ ರಾಜ್ಯದವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ 3ಕಷ್ಟವಿಲ್ಲದೆ ಇಷ್ಟ ದೊರಕುವದು ನೆನೆದುಸುಖದಿಂ ಬಾಳುವದುದೃಷ್ಟಿಯಿಂದಲಿನೋಡುನಮ್ಮ ದೊರೆಯ ಹರಿಯಪರಿಯ ನೀನರಿಯಾಸಿಟ್ಟುಮಾಡುವ ಸ್ವಾಮಿನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ 4ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ