ಎಂಥ ಪಾಪಿ ನಾನು ಹರಿ ಹರಿ ಪ
ಕರ್ಮ ತಿಂತಿಣಿಗಳ ಬಾಧೆಗಳನು | ಅಂತ್ಯಗಾಣದಾದೆನಯ್ಯ ಅ.ಪ
ಪರಹಿತಾರ್ಥ ಮನದೊಳೆಣಿಸದೆ ||
ನರಕದುಃಖದೊಳು ಗೋಳಿಡಲು | ಬರುವರಾರು ಕಾಣದಿರಲು 1
ಪರ ಇರುತ ಮಾಯಾಬಲೆಯೊಳಗೆ ಬಿದ್ದೆ ||
ಕರೆದರಾರು ಬಾರದಿನಿತು | ಪರಿಯ ಭವಕಿಲ್ಬಿಷವನುಣುವ 2
ಶ್ವಾನನಂತೆ ನಾನು ತೊಳಲಿದೆ ||
ತಾನು ತನ್ನದೆಂದಧರ್ಮ ನಾ | ಏನನೆಂದರು ಕೇಳರಯ್ಯ 3
ಅನ್ಯರೆಂದು ಪರರ ನಿಂದಿಸಿ | ಪುಣ್ಯಹೀನನಾದೆನಯ್ಯ 4
ಸರ್ವವಿಧದಿ ಭಜಿಸಿ ನಿಜ | ಸರ್ವೇಶ ಶ್ರೀನಿವಾಸನೆನದೆ 5