ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬದೆ-ನಾ-ಕೆಟ್ಟೆ ಪ ಅಂಬುಜಾಕ್ಷನೆ ನಿನ್ನಾ ಅ.ಪ ಗಳಿಸಿತು ಬಹುಕಾಲಾ ವಿಷಯಕೆ ಆಯ್ತೆಲ್ಲಾ ಅತಿಶಯ ವಾಯ್ತಾಶೇಗತಿಯನು ನಾಕಾಣೆ ಮತಿವಂತ ವ್ರತತತಿ ಜಪಜಪ ಹೋಮಕೆ ಗತಿದಾಯಕ ನಂಬದೆ 1 ಬಂದೆನು ಬಹುಸಾರಿ ನೊಂದೆನು ಈ ಪರಿಯೇ ಕಂದಿಸೆ ಯಮರಾಯಾ ಬಂಧುವು ಯಾರೈಯ ಇಂದಿರೆ ಮನಶಶಿ ಸುಂದರಮೂರ್ತಿ ಮಹೇಂದ್ರ ಪರಾತ್ಪರ ಪೂರ್ಣಾನಂದನ 2 ಮಾಡಿಹೆನಪರಾಧ ಪಾಡದೆ ತವ ಮಹಿಮೆ ಬೇಡುವೆ ನಿಜಭಕ್ತಿ ಓಡಿಸು ಈ ಬುದ್ಧಿ ಓಡಿಸೆ ಜಗ ಕಾಪಾಡುತಜೀವರ ಈಡು ದಿಕ್ಕಿಲ್ಲದ ಗೂಢ ಸ್ವತಂತ್ರನೆ 3 ಜ್ಞಾನವ ನಾಬಿಟ್ಟೆ ಹೀನನು ಹೇ ಧೊರೆಯೆ ಜ್ಞಾನದ ಶರಣೆಂಬೆ ಏನನು ಕೊಡಲಾರೆ ಆನತ ಬಂಧುವನಂತ ಗುಣಾರ್ಣವ ಶ್ರೀನಿಧಿ ಸೃಷ್ಟಿವಿನೋದವ ಗೈವನ4 ಬಂದಿಯು ನಾನೈಯಾ ಬಂಧಕ ನೀನೈಯ ಎಂದಿಗುನಾದಾಸಾ-ತಂಡಿಡು ನೀಲೇಸಾ ನಂದ ಮುನೀಂದ್ರ ಸುಮಾನಸ ಮಂದಿರ ನಂದದ ಶ್ರೀವರ “ಶ್ರೀ ಕೃಷ್ಣವಿಠಲ”ನ5
--------------
ಕೃಷ್ಣವಿಠಲದಾಸರು
ಉಡುಪಿಯ ಶ್ರೀಕೃಷ್ಣ ನುಡಿಯ ಲಾಲಿಸು ಮಾಧವ ನುಡಿಯ ಲಾಲಿಸು ಪಾಲಕಡಲಶಯನ ದೇವ ಕಡಗೋಲ ಪಿಡಿದ ನಮ್ಮುಡುಪಿಯ ಶ್ರೀಕೃಷ್ಣ ಪ. ಮಾನವ ಮದವನ್ನು ಮಸರಂತೆ ಮಥಿಸಿದ ಭಾವನ ತೋರುವಿಯೊ ಹಾಗಲ್ಲದಿದ್ದರೆ ದೇವತಗಳಿಗಮೃತವನುಣಿಸಿದನೆಂಬ ಸೋವನು ಸೂಚಿಪೆಯೊ ಸೌಭಾಗ್ಯ ಸಿರಿಯೊ ಸೇವಕರ ಸೇವಾನುಗುಣಫಲ ನೀವ ತರತಮ ಭಾವವೊ ಭವ ನಾವ ನಡೆಸುವ ನಿಪುಣತೆಯೊ ದುರಿ ತಾವಳಿಯ ದೂರೋಡಿಸುವೆಯೊ1 ಕಲಿಯ ಬಲದಿ ಜ್ಞಾನಕಲೆಯಡಗಲು ದೇವ- ರ್ಕಳು ಬಂದು ಸ್ತುತಿಸಲಂದು ಸಕಲಸುರ ತಿಲಕ ವಾಯುವಿನ ಭೂವಲಯದೊಳವ- ಗೊಳುವರೆ ಪೇಳ್ವೆನೆಂದು ನೀ ಮನಕೆ ತಂದು ಹಲವು ಭವದಲಿ ಭಜಿಪೆ ಸಜ್ಜನ ಕುಲಕೆ ಮೋಕ್ಷಾಂತದ ಚತುರ್ವಿಧ ಫಲವ ನೀಡುವೆನೆಂದು ಪವನನಿ- ಗೊಲಿದು ಬಂದೀ ನಿಲಯದೊಳಗಿಹೆ 2 ಸರ್ವಜ್ಞ ಮುನಿಕೃತ ಸಕಲ ಪೂಜೆಗಳನ್ನು ನಿವ್ರ್ಯಾಜದಲಿ ಕೊಳ್ಳುತ ನಿರ್ವಾಹಗೊಳುತ ದುರ್ವಾದಿಪಟಲಾದ್ರಿ ಗರ್ವಾಪಹರ ಶತ ಪರ್ವ ಶಾಸ್ತ್ರವ ಕೇಳುತ ಸಂತೋಷಪಡುತಾ ಪೂರ್ವಸುಪರ್ವ ರಿಪುಗಳ ನಿರ್ವಿಯೊಳಗಡಿಯಿಡಗೊಡದ ಸುರ ಸಾರ್ವಭೌಮ ಶುಭೋನ್ನತಿ ಪ್ರದ 3 ಶ್ರೀನಿಕೇತನ ಸರ್ವ ಪುರುಷಾರ್ಥದಾಯಿಯೆ ನೀನೆಲ್ಲೆ ನೆಲೆಯದೋರಿ ಇರಲಿನ್ನು ಭಜಿಸದೆ ನಾನಾ ದೈವಗಳ ಸೇರಿ ಹಲ್ಲುಗಳ ತೋರಿ ಏನನುಸುರುವೆ ಕೃಷ್ಣ ಬುದ್ಧಿ ವಿ- ಹೀನತೆಯನದನೊ ಮಾನಿಸೆನ್ನ ಕಡಪಾನಿಧಿಯೆ ಪವ- ಪಾದ ಪಲ್ಲವ 4 ದ್ವಾರಾವತಿಯೊಳು ಸಂಸಾರಿ ಭಾವವನೆಲ್ಲ ತೋರಿದ ಕಾರಣದಿ ಅಲ್ಲಿಂದ ಭರದೀ ವಾರುಧಿ ಮಾರ್ಗದ ಸ್ವಾರಿಯ ನೆವನದಿ ಪಾರಿವ್ರಾಜರ ಸೇರಿದಿ ತದ್ಭಕ್ತಿಗೊಲಿದಿ ದೂರ ಭಯದಲಿ ವೆಂಕಟಾದ್ರಿಗೆ ಬಾರದಿಹ ಸಜ್ಜನರ ಮೇಲ್ಕರು- ಣಾರಸಾಮೃತ ಸೂಸುತ್ತಿಲ್ಲಿ ಸರೋರುಹಸ್ಮಿತ ಮುಖ ತೋರುವಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ ಇಲ್ಲದೆ ಪೋದರೆ ನಿಲ್ಲದೆ ಏನನು ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ ಕೊಡಲಿ ಹೊತ್ತು ಬರುತಾನ ತಾಯಿ ಗಡನೆ ಹೊರಳಿ ನೋಡಿನ್ನ ಬಡವರ ದಯಾನಿಧಿ ಕಡುಬಾಧೆ ಕಂಡರೆ ತಡೆಯದೆ ನಿನ್ನನು ಕಡಿಯದೆ ಬಿಡನವ್ವ 1 ತಂದೆವಚನ ಪರಿಪಾಲನು ಅವ ಬಂದರೆ ನಿನ್ನನು ಕೊಂದಾನು ಕಂದನ ಬಂಧನ ಚಂದದಿ ಕಳೆದಾ ನಂದವ ಕೊಡು ಕೊಡು ಸುಂದರಮುಖಿಯೆ 2 ಕಾರ್ತವೀರ್ಯ ತಂದಾನೇ ಈ ವಾರ್ತೆ ಕೇಳಲು ನಿನ್ನ ಬಿಟ್ಟಾನೇ ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ 3
--------------
ರಾಮದಾಸರು
ಚನ್ನಕೇಶವ ಚನ್ನಕೇಶವ ಚನ್ನಕೇಶವ ತ್ರಾಹಿಮಾಂ ಪ ಮನ್ನಿಸೆನ್ನನು ರಕ್ಷಿಸೆನ್ನನು ಸನ್ನುತಾಂಗನೆ ಪಾಹಿಮಾಂ ಅ.ಪ. ಭವದಿ ನೊಂದೆನು ಸವೆದು ಬೆಂದೆನು ಜವದಿ ಬಂದೆನು ತ್ರಾಹಿಮಾಂ ಭವಣೆಯನು ಪರಿಹರಿಸಿ ದೇವನೆ ಭವ ವಿದೂರನೆ ಪಾಹಿಮಾಂ1 ನಾನು ಏನನು ನಿನ್ನ ಮರತೆನು ನಾನು ಬಡವನು ತ್ರಾಹಿಮಾಂ ಗಾನ ಲೋಲನೆ ಬಿಡದೆ ಭಜಿಸುವೆ ದೀನ ವತ್ಸಲ ಪಾಹಿಮಾಂ 2 ಭಕ್ತವತ್ಸಲ ಭಕ್ತದಾಯಕ ಭಕ್ತಿಯರಿಯೆನು ತ್ರಾಹಿಮಾಂ ಮುಕ್ತಿದಾಯಕ ಶಕ್ತಿ ಮೂರುತಿ ಮುಕ್ತಿ ಪಾಲಿಸಿ ಪಾಹಿಮಾಂ3
--------------
ಕರ್ಕಿ ಕೇಶವದಾಸ
ನಾ ಕರೆವುದಕಿಂತತಾನಾಗಿ ಕರೆವಳ ಕಂಡರೆ ಸೊಗಸುನಾನೆ ನೀನುನೀನೇ ನಾನುಏನನುಮಾನವೋ ಬಾರೆಂದೆನುತಲಿ ಪ ಕಣ್ಣ ಸನ್ನೆಯ ಮಾಡಿ ಕರೆವುತಬಣ್ಣಿಸಿ ಬೇಟವ ತೋರುತ್ತನಿನ್ನನಾ ಬಿಡೆನೆಂದು ನಗುತ ಮಾತಾಡುತ 1 ನೆಂಟರಿಷ್ಟರು ಕಾಣದಂದದಿ ಬಂದುಗಂಟೆರಡನು ಸಡಲಿಸುತಲಿ ನಿಂದುಬಂಟನಾದರೆ ನೀನೆರೆಬಾರೆಂದು 2 ಕುಂಭ ಕುಚಂಗಳ ತೋರುತ್ತತಾಂಬೂಲವ ಹಸಮಾಡುತ್ತನಂಬುಗೆ ರಾಮೇಶ್ವರನಿದಕೆನುತ 3
--------------
ಕೆಳದಿ ವೆಂಕಣ್ಣ ಕವಿ
ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು