ಏನನಾದರೂ ಬರೆಯೋ ಎನ್ನ ಪಣೆಯೊಳಗೆನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ಪ
ಬಾಲತನದಲಿ ಬಹಳ ಭಾಗ್ಯ ಸಂಪದಗಳನುಮೇಲೆ ಯೌವನ ಬರಲು ಬಡತನವನುಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನುಹಾಲು ಅನ್ನವನಿಕ್ಕಿದವರಿಗೆ ಮುನಿವುದನು1
ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನುತುಪ್ಪವಿಲ್ಲದ ಭೋಜನದ ರುಚಿಯನುಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನುಕಪ್ಪುಗೊರಲನ ನೆನೆಯದೇ ದಿನವ ಕಳೆವುದನು 2
ಪರರೊಡವೆಯನು ತಿಂದ ಶರೀರವನೆ ಪೊರೆವುದನುಪರರ ನಿಂದೆಯ ಮಾಡಿ ಬಾಳುವುದನುವರ ಕೆಳದಿ ರಾಮೇಶ ನಿನ್ನ ಪಾದಾಂಬುಜವಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು 3