ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೇಳ ಸುಲಭವೆ ಜಗದಿ ಕಾಲಮಹಿಮೆಯ ನಮ್ಮ ಮೂಲ ಪುರುಷನ ದಿವ್ಯ ಲೀಲೆಯಲ್ಲವೆ ಎಲ್ಲ ಅ.ಪ ಮುಂದೆ ಸ್ತುತಿಪರು ಜನರು ಹಿಂದೆ ಜರಿವರು ಬಹಳ ತಂದೆ ಬಡವನ ನೀನ್ಯಾರೆಂದು ಕೇಳ್ವರು ಮನದಿ 1 ನೀಚಕೃತ್ಯವ ಮನದಿ ಯೋಚಿಸುತ್ತಲಿ ಸತತ ನಾಚಿಕೆಯನು ಪೊಂದದೆಲೆ ಯಾಚಿಸುವರು ದ್ರವ್ಯವನು 2 ಸತಿಯರೆಲ್ಲರು ಶುದ್ಧಮತಿಯ ತೊರೆಯುತ ತಮ್ಮ ಪತಿಯ ಜರಿವರು ಮುದದಿ ಇತರರನ್ನು ಕೋರುವರು 3 ಕಾಲ ಕಳೆದು ಖ್ಯಾತಿ ಪಡೆವರು ಬಹಳ ಸೋತು ತಮ್ಮ ದ್ರವ್ಯಗಳ ಪಾತಕಗಳ ಮಾಡುವರು4 ಸ್ನಾನ ಜಪತಪ ಪೂಜೆ ಏನನರಿಯರು ದುಷ್ಟ ಪಾನಗಳನು ಸೇವಿಸುತ ಮಾನ ದೂರ ಮಾಡುವರು 5 ಹರಿಯ ಮಹಿಮೆಗಳನ್ನು ಅರಿಯದಂತೆ ಸಂತತವು ಧರೆಯ ದುಷ್ಟ ಭೋಗದಲಿ ಕುರಿಗಳಂತೆ ಬೀಳುವರು 6 ಘನ್ನ ಧರ್ಮಗಳೆಲ್ಲ ಶೂನ್ಯವಾಗಿರೆ ಸುಪ್ರ ಸನ್ನ ಹರಿಯ ಸೇವಕರು ಇನ್ನು ಇರುವುದಚ್ಚರಿಯು7
--------------
ವಿದ್ಯಾಪ್ರಸನ್ನತೀರ್ಥರು