ಏನಗೈದೊಡೇನು ನಿನ್ನ ಬಿಡೆನು ನಾನೆಲೈ
ಉದಧಿಶಯನ ಕೇಳೆಲೈ ಈ ಹದನ ಲಾಲಿಸೈ ಪ.
ಎತ್ತ ಪೋದಡತ್ತ ನಿನ್ನ ಬೆನ್ನ ಹತ್ತುವೆ ನಿನ್ನ
ಸುತ್ತಿ ಕಾಡುವೇ ನೀನೆತ್ತ ಪೋಗುವೆ 1
ಜಲಧಿಯಲ್ಲಿ ವಾಸಗೈದೆ ಬೇಸರಿಲ್ಲದೆ
ಮೋದದೆ ನೀ ಏನಗೈದೆ 2
ಘೋರ ರೂಪಕಲಸದೆ ಕೆನ್ನೀರ ನೀಂಟಿದೆ
ಕರುಳಮಾಲೆ ಧರಿಸಿದೆ ಕಪಟರೂಪ ತಾಳಿದೆ 3
ನಲಿದು ತಾಯ ತಲೆಯ ಕಡಿದು ಬಲಿದನೆನಿಸಿದೆ
ಜಲಧಿಯನ್ನೆ ಕಟ್ಟಿದೆ ಛಲದಿ ದ್ವಿಜನ ಕೆಡಹಿದೆ 4
ಜಾರಚೋರನೆನಿಸಿ ಜಗವಗಾರುಗೊಳಿಸಿದೆ
ಕುದುರೆಯೇರಿದೆ ಇನ್ನೇನು 5
ಇಷ್ಟು ಪಾಡುಪಟ್ಟ ನಿನ್ನ ಬಿಟ್ಟು ಪೋದೆನೆ
ದಿಟ್ಟತನಕೆ ಭೀತಿಪಟ್ಟೆನೇ ನಿನ್ನ ಪಿಡಿಯದಿರ್ಪನೆ6
ಮೋಸಗಾರ ಶೇಷಶೈಲವಾಸನಹುದೆಲೈ
ವಾಸಿಪಂಥವೇನೆಲೈ ಮೀಸಲಾಗಿ ಭಜಿಪೆ ನೋಡಲೈ7