ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಥವನೇರಿದ ರಥಿಕನಾರೇ ಪೇಳಮ್ಮಯ್ಯ ಕಥಿತಧ್ಯಾತ ಸಂಸ್ತುತ ವಿತತಾನತ ಹಿತಕರ ದಿವಿಷÀತ್ಪತಿ ಕಾಣಮ್ಮ ಪ ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ. ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ ಆಟದೆ ಕುರುಜ ಮಹಾಟವಿ ಸವರಿ ಕಿ ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1 ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2 ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
--------------
ಜಗನ್ನಾಥದಾಸರು