ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇತ್ತೆ ಏತಕ್ಕೆ ಈ ನರಜನ್ಮವ ಸತ್ಯ ಸಂಕಲ್ಪ ಹರಿ ಎನ್ನ ಬಳಲಿಸುವುದಕೆ ಪ. ಬಂಧುಬಳಗವ ಕಾಣೆ ಇಂದಿರೇಶನೆ ಭವದಿ ಬೆಂದು ನೊಂದೆನೊ ನಾನು ಸಿಂಧುಶಯನ ಬಂದ ಭಯಗಳ ಬಿಡಿಸಿ ನೀನೆ ಪಾಲಿಸದಿರಲು ಮಂದಮತಿಗೆ ಇನ್ನು ಮುಂದೆ ಗತಿ ಏನೊ 1 ಕಾಣದಲೆ ನಿನ್ನನು ಕಾತರಿಸುತಿದೆ ಮನವು ತ್ರಾಣಗೆಡÀುತಲಿ ಇಹುದೊ ಇಂದ್ರಿಯಗಳೆಲ್ಲ ಪ್ರಾಣಪದಕನೆ ಸ್ವಾಮಿ ಶ್ರೀನಿವಾಸನೆ ದೇವ ಜಾಣತನವಿದು ಸರಿಯೆ ಫಣಿಶಾಯಿಶಯನ 2 ಸಾಧನದ ಬಗೆಯರಿಯೆ ಸರ್ವಾಂತರ್ಯಾಮಿಯೆ ಮಾಧವನೆ ಕರುಣದಲಿ ಕಾಯಬೇಕೊ ಹಾದಿ ತೋರದೊ ಮುಂದೆ ಮುಂದಿನಾ ಸ್ಥಿತಿಯರಿಯೆ ಛೇದಿಸೊ ಅಜ್ಞಾನ ಹೇ ದಯಾನಿಧಿಯೆ 3 ಸರ್ವನಿಯಾಮಕನೆ ಸರ್ವಾಂತರ್ಯಾಮಿಯೆ ಸರ್ವರನು ಪೊರೆಯುವನೆ ಸರ್ವರಾಧೀಶ ಸರ್ವಕಾಲದಿ ಎನ್ನ ಹೃದಯದಲಿ ನೀ ತೋರೊ ಸರ್ವ ಸಾಕ್ಷಿಯೆ ಸತತ ಆನಂದವೀಯೊ 4 ಆನಂದಗಿರಿನಿಲಯ ಆನಂದಕಂದನೆ ಆನಂದ ಗೋಪಾಲಕೃಷ್ಣವಿಠ್ಠಲಾ ಆನಂದನಿಲಯ ಶ್ರೀ ಗುರುಗಳಂತರ್ಯಾಮಿ ನೀನಿಂದು ಸರ್ವತ್ರ ಕಾಯಬೇಕಯ್ಯ 5
--------------
ಅಂಬಾಬಾಯಿ
ಜ್ಞಾನಶೂನ್ಯಗಾತ್ಮದನುಭವವ್ಯಾಕೆ ಹೀನ ಸಂಸಾರಿಗೆ ಪರದ ಸುದ್ದ್ಯಾಕೆ ಪ ಕತ್ತೆಗೆ ಬೆಲೆಯುಳ್ಳ ಉತ್ತಮ ಜೀನ್ಯಾಕೆ ಕೃತ್ರಾಮಗೆ ಸತತ ಸತ್ಪಥದ ಬೋಧ್ಯಾಕೆ ತೊತ್ತಿಗ್ಹೋಗುವಗರಸೊತ್ತಿಗಧಿಕಾರವ್ಯಾಕೆ ಮಿಥ್ಯೆಮತಿಗ್ಯಾತಕ್ಕೆ ಉತ್ತಮರ ನೆರೆಯು 1 ನಂಬಿಗಿಲ್ಲದವಗ್ಯಾಕೆ ಗುಂಭದ ಮಾತುಗಳು ಜಂಬಕೊಚ್ಚುವವಗ್ಯಾಕೆ ಗಂಭೀರತನವು ಅಂಬುಜಾಕ್ಷನ ಚರಿತ ಡಂಭನಿಗ್ಯಾತಕ್ಕೆ ಗೊಂಬೆಯಾಟಗಾರಗ್ಯಾಕೆ ತಂಬೂರಿ ತಬಲ 2 ದಾನಧರ್ಮದ ಮಹಿಮೆ ಜೀನನಿಗೆ ಏತಕ್ಕೆ ಗೋಣು ಮುರಿವವಗ್ಯಾಕೆ ದೈನ್ಯಮಾತುಗಳು ನಾನಾ ಬಯಕೆಯುಳ್ಳ ಮಾನವಗೆ ಭಕ್ತಜನ ಪ್ರಾಣ ಶ್ರೀರಾಮ ನಿಮ್ಮ ಧ್ಯಾನವಿನ್ಯಾಕೆ 3
--------------
ರಾಮದಾಸರು
ಲೌಕಿಕ ಏತಕ್ಕೆ ನಮಗೆ ಪ ಲೋಕೇಶ ಕೃಷ್ಣನ್ನ ಮರಿಸಿ ಕೆಡಿಸುವಂಥ ಅ.ಪ. ಸುಳ್ಳು ಹೇಳಲಿಬೇಕು ಕಳ್ಳನಾಗಲಿಬೇಕು ಮೆಲ್ಲನೆ ಸವಿಮಾತು ಆಡಿನಟಿಸಬೇಕು ಪುಲ್ಲನಾಭನ ಬಿಟ್ಟು ಹುಲ್ಲುಮಾನವನನ್ನು ಕಾಲ ಕಳಿಸುವಂಥ 1 ಗಡ್ಡ ಬೋಳಿಸಬೇಕು ದುಡ್ಡುಗಳಿಸಬೇಕು ಬಡ್ಡಿಗೆ ಕೊಡಬೇಕು ದೊಡ್ಡ ಮನೆಯ ಕಟ್ಟಿ ಅಡ್ಡಿಯಿಲ್ಲದೆ ಮೆರೆದು ದೊಡ್ಡವನಾಗಬೇಕು ಹೆಡ್ಡಮಂದಿಯಲಿರಿಸಿ ಗೊಡ್ಡು ದೇಹವ ಮಾಳ್ವ 2 ಸತಿಸುತ ಧನಗಳನೆ ಗತಿ ದೈವನೆನಬೇಕು ಹಿತದಿಂದ ದುಡಿಯುತ ಸತಿಯರಿಗಿಡಬೇಕು ಗತಿದಾಯಕ ನಮ್ಮ “ಶ್ರೀ ಕೃಷ್ಣವಿಠಲ”ನ್ನ ಶಾಸ್ತ್ರನೇತ್ರದಿ ನೋಡೆ ಪುರಸೊತ್ತು ಕೊಡದಂಥ 3
--------------
ಕೃಷ್ಣವಿಠಲದಾಸರು