ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೀ ಭಯ ನೀತಿಯೇನಯ್ಯ ಪ ಮಾತುಕೇಳು ತಾಮನದಲ್ಲಿನೊಂದು ಅ.ಪ ತಬ್ಬಿಕೊಂಡಿರ್ಪ ಪ್ರಾರಬ್ದ ಬಿಡುವುದೆ ಅಬ್ಜನಾಭನಿರುವ ನಮ್ಮರಕ್ಷಿಸಲು 1 ಬೊಬ್ಬೆರೋಗ ಬಂತೆಂದಬ್ಬರ ಜನಗೈಯ್ಯೆ ಉಬ್ಬಿಉಬ್ಬಿನೀ ಊರಬಿಟ್ಟೋಡಲು 2 ಹುಲಿಗಳಂಥನರರು ಇಲಿಯ ನೋಡಿ ಬೆದರಿ ಕಳೆದುಕೊಂಬರು ತಮ್ಮ ಸರ್ವಸ್ವವ 3 ಛಳಿ ಮಳೆಯು ಬಿಸಿಲು ಗಾಳಿಯೊಳು ಬಳಲುವುದ್ಯಾಕೆ ಬುದ್ಧಿಯಿಲ್ಲದೆ 4 ಕುನ್ನಿ ನಿನ್ನಂಥವರೆಷ್ಟುಮಂದಿ ಪೋದರು ಘನ್ನಗುರುರಾಮವಿಠಲನ್ನ ನಂಬು5
--------------
ಗುರುರಾಮವಿಠಲ
ಏತಕೀಪಂಥ ಜಾನಕೀಕಾಂತ ಭೂತಲನಾಥ ಶಾಂತಸುಸ್ವಾಂತ ಪ. ಸೊಮಸಮಾನನೆ ತಾಮರಸೇಕ್ಷಣ ಶ್ರೀಮಾನಿನೀ ಮನೋಮೋಹನ ಸುಂದರ 1 ಅಂಗಜತಾತ ಮಂಗಳಗಾತ್ರ ಗಂಗೆಯಪೆತ್ತ ಉತ್ತುಂಗಮಹಿತ 2 ಮಂದರೋದ್ಧಾರಿ ತಂದೆ ಕಂಸಾರಿ ಬಂದುಮೈದೋರಿ ಪೊರೆಯೆನ್ನ ಶೌರಿ3 ವರಶೇಷಗಿರಿದೊರೆ ಶರಣರ ಈ ಮೊರೆ ಕರಗಿಸಲಾರದೆ ಏನಿದು ಕಲ್ಲೆದೆ 4
--------------
ನಂಜನಗೂಡು ತಿರುಮಲಾಂಬಾ
ಏನೊ ಜೀವ ನನ್ನ ನುಡಿವ ನಾಲಗೆಯು ನಿನ್ನದೇನೊ ಕಾಣೆ ನಿನ್ನಾ ಬಣ್ಣವನೆನ್ನಾಣೆ ಕೇಳು ಪೇಳುವೆನೂ ಪಭೂತಂಗಳು ಪುಸಿಯೇನೊ ಮಾತೆ ಮಾಯೆಯಲ್ಲವೇನೊಏತಕೀಗರ್ವವು ನೀನು ಜಾತನಾದ ಬಗೆಯೇನೊಕೈತವವ ಬಿಡುುನ್ನೂ ಹೇತು ಹೀನೋಕ್ತಿಗಳೇನುನೀತಿಯಾಗಿ ಪೇಳು ನಾನು ತಾತಪ್ಯಮಾನನಪ್ಪೆನೂ 1ಬಿಸಿಲು ದೊರೆದೇರನೆ ನಾನು ಮಸಿಯಮಾತ ನುಡಿವೆ ನೀನುನಶಿದು ಪೋಪೆನಹುದು ನಾನು ಹಸದೊಳಿಪ್ಪುದುಂಟೆ ನೀನುಸಸಿನೆ ತಿಳಿದುಸುರಿನ್ನು ಕುಸಿಯ ಹಾಕದಿರೆನಿನ್ನೂನುಸುಳುದಾರಿ ಮನವನ್ನು ಹೊಸದು ಕೊಂಡಾಡಿದರೇನು 2ನೋಡುವ ಕಣ್ಣು ನಿನ್ನದೇನೊ ಆಡುವಾಟನಿನ್ನದೇನೊಓಡುವ ಕಾಲು ನಿನ್ನದೇನೊ ನೀಡುವ ಕೈ ನಿನ್ನದೇನೊಬೀಡ ಬಿಡುವರೆ ನೀನು ಗೂಡಾಗಿುದ್ದೆ ನಾನುಕೂಡಲಿಂದ್ರಿಯ ಕರಣ ತಾನು ಕಾಡುಪಾಲಾಗುವೆನೀನು 3ಎದ್ದು ನಡೆದಾಡುವೆ ನಾನು ನಿದ್ರೆಗೈವೆ ಮಲಗಿ ನಾನುಹೊದ್ದುಕೊಂಬೆ ಹೊದಿಕೆಗಳನು ಗದ್ದುಗೆಗಧಿಕಾರಿ ನಾನುಸಿದ್ದಿಯೆನ್ನಿಂದಲೆ ತಾನು ನಿರ್ಧರಿಪುದಿದ ನೀನುಬುದ್ದಿಹೀನನಾಗದಿರಿನ್ನು ಬದ್ಧವಾಡು ಕೇಳ್ವೆ ನಾನು 4ತಿರುಪತೀಶನಂಘ್ರಿ ನಾನು ಬರಿಯ ಪ್ರತಿಬಿಂಬ ನೀನುಗುರುವಾಸುದೇವಾರ್ಯರನ್ನು ಎರಗಿ ಸಂಪಾದಿಸಿದೆ ನಾನುಕರೆದು ಬಿಗಿದಪ್ಪಿದರೆನ್ನುವನು ಒರೆಯೆ ಕಿವಿಯೊಳ್ಮಂತ್ರವನ್ನುಭರದಲೆನ್ನ ಜಿಹ್ವೆ ಜಪಿಸಿ ಅಂತೆನೆಂಬೆ ನಿನ್ನ ನೀನು 5ಕಂ||ಒರಟುತ್ತರದಿಂದ ದೇಹವು ಬರಿ ಜಗಳವ ತೆಗೆಯೆ ಜೀವನರಿತಿದರಂದವ ನೆರೆಮೂರ್ಖರ ದಾರಿಯೊಳಗೆಬರುತರುಪುವ ಜಾಣನೆಂದು ನೀತಿಯ ನುಡಿದಂ
--------------
ತಿಮ್ಮಪ್ಪದಾಸರು
ಯಾತಕೆ ಮರೆತೆನ್ನ ಯತಿಕುಲ ತಿಲಕನೆ ಪ್ರೀತಿಯ ಬಯಸುತ ಬಂದೆ ಪ ವಾತಸುತಗತಿಪ್ರಿಯ ದೂತನೆ ನಾಥನೀನೆಂತೆಂದು ನಂಬಿದೆ ಖ್ಯಾತಗುರು ಶ್ರೀ ರಾಘವೇಂದ್ರನೆ ಅ.ಪ. ದೇಶದೇಶದಿ ಬರುವ ದಾಸಜನರÀಘ ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ ಶೇಷಶಯನನ ದೋಷ ಜ್ಞಾನ ವಿಶೇಷದಿಂದಲಿ ನ್ಯಾಸಮಾಡಿದೆ ಭೂಸುರೋತ್ತಮ 1 ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ ನಲ್ಲ ಯತಿವರ ಕಾಲಿಗೆರಗುವೆ ಶೀಲಭಕುತಿಯ ಪಾಲಿಸೀಗಲೆ 2 ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ 3 ದಾತ ಈತನೆಂಬ ಖ್ಯಾತಿ ಬಿರುದು ನಿನಗೆ ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ ಬೋಧೆಯ ನೀತಿ ಪೇಳಿದೆ ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ4 ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ ಸೂರಿ ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ 5 ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ ನೂಕಿ ದುರಿತರಾಶಿ ಸಾಕುಹರಿಯ ತೋರಿ ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ ನಾಕ ಋಷಿಗತಿಪ್ರಿಯ ಶಿಷ್ಯನೆ 6 ಪಾಹಿ ಜ್ಞಾನದ ಖಣಿಯೆ ಪಾಹಿ ಭಕ್ತರ ನಿಧಿಯೆ ಪಾಹಿ ಮತಿಮತಸ್ಥಂಭ ಪಾಹಿ ಶ್ರೀ ಹರಿಯ ದೂತ ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ 7
--------------
ಕೃಷ್ಣವಿಠಲದಾಸರು