ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕಿನಿತು ಕೋಪವಾಂತು ಭೀತಿಗೊಳಿಸುವೆ ರೀತಿಯೇನಿದನಾಥ ನಾಥ ನೀತಿಯೆನಿಪುದೆ ಪ. ಪರಮದಯಾಕರನು ನೀನೆನುತೊರೆವುದಾಗಮ ಪರಿಯ ನೋಡಲು, ಕರುಣೆ ನಿನ್ನೊಳಿರುವುದರಿಯೆ ನಾ1 ಪಾಲನೂಡಿದ ನಾರಿಗಂದು ಕಾಲನೆನಿಸಿದೆ ಕಾಲಕಾಲ ಶೂಲಿವಿನುತ ನೀಲವರ್ಣನೆ 2 ವರವನೀವ ವರದನೆಂದೇ ಹಿರಿಯರೊರೆವರು ಚರಣತಲದಿ ಶಿರವನಿಟ್ಟರು ತೆರೆಯೆ ಕಣ್ಗಳಂ3 ಅಡಿಯ ಪಿಡಿದು ಬೇಡಿಕೊಂಬೆ ಪೊಡವಿಗೊಡೆಯನೆ ಬಿಡದೆ ಕೈಯಪಿಡಿದು ಸಲಹೊ ಒಡೆಯ ಬೇಗನೆ 4 ಶೇಷಶೈಲ ಶಿಖರಧಾಮ ಯದುಕುಲೋತ್ತಮ ಶೇಷಶಯನ ಸಲಹು ನಮ್ಮ ಸತ್ಯವಿಕ್ರಮ5
--------------
ನಂಜನಗೂಡು ತಿರುಮಲಾಂಬಾ