ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ.
ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ
ಫಣಿವೇಣಿ ಮಂಜುಳವಾಣಿ
ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ 1
ದೂರೆ ಶುಭ್ರಾಂಬರೆಧಾರೇ
ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ
ಕರಪಲ್ಲವ ಚತುರೇ 2
ವರದೇ ರಸನದೆ ನಿಂತವಸರದೇ
ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ
ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ
ತೆರದಿಂ ಕುಡುವರಮಂ 3