ಏಳೊ ಬಾಲನೆ ವೇಳೆ ಮೀರುತಿಹುದು ಪ
ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ
ಎದ್ದು ಬಾರೆಲೋ ಮುದ್ದು ಬಾಲಕೃಷ್ಣ
ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು 1
ಜಾಣ ನಿನ್ನಯ ವೇಣುನಾದ ಕೇಳೆ
ಏಣನಯನೆಯರು ಕಾಣ ಬಯಸುತಿಹರು 2
ಯಮುನಾ ತೀರದಿ ಸುಮಲತೆಗಳಲ್ಲಿ
ಕಮಲನಯನ ನಿನ್ನ ರಮಿಸ ಬಯಸುತಿಹರು 3
ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ
ಜ್ಞಾನ ಪೊಂದೆ ಗುಣಗಾನ ಮಾಡುತಿಹರು 4
ನಿನ್ನ ಪ್ರಿಯ ಜನರನ್ನು ಕಾಯಿಸಲು
ಇನ್ನು ತರವೇನೋ ಪ್ರಸನ್ನವದನನಾಗಿ 5