ಯೆಂದು ಪಿಡಿಯುವಿ ಕೈಯ್ಯ
ಇಂದಿರೇಶ ಚಲುವ ಕೃಷ್ಣನೆ ಪ
ಮುಂದೆ ಹೋಗಲು ಬಂಧಮಾಡುತ
ಕುಂದು ಅಳಿಯುತ ತಂದೆ ದಯೆತೊರಿ ಅ.ಪ
ಮಂದ ನಾನಯ್ಯ
ಕಂದಿ ಕುಂದಿದೆ ಭವದಿ ಕೇಳಯ್ಯ
ಬಂಧು ಬಳಗವು ಯಾರು ಇಲ್ಲಯ್ಯ
ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ
ಅಂದು ಸಭೆಯೊಳು ಮಂದಗಮನೆಯ
ಒಂದು ನೊಡದೆ ಬಂದು ಸಲಹಿದ
ಸಿಂಧು ಶಯನಾನಂದ ಮೂರುತಿ
ನಂದನಂದನ ಶ್ಯಾಮಸುಂದರ
ಬಂಧು ಸರ್ವರ ಬಂಧಮೋಚಕ
ಮಂದರಾದ್ರಿ ಧರನೆ ಯದುಕುಲ
ಚಂದ್ರ ಶೋಭಾಸಾಂದ್ರ ಕೃಷ್ಣನೆ
ಬಂದು ಚಂದದಿ ಸಲಹಿ ಎನ್ನನು 1
ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ
ಮೇಲೆ ಯೌವನ ಒಡನೆ ಬಂತಲ್ಲಿ
ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ
ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ
ಕಾಲಕಳೆದೆನು ಪಗಡೆ ಜೂಜಿನಲಿ
ಮಲ್ಲಮರ್ದನ ಮಾತುಲಾಂತಕ
ಚಲ್ವಸೂಕರ ಪುಲ್ಲಲೊಚನ
ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ
ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ
ಸಾರ ಶ್ರೀ
ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ
ಬುದ್ಧ ಕಲ್ಕಿಯೆ
ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ
ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2
ಮೂರು ತಾಪವ ಹರಿಪ ಬಗೆಯೇನೋ
ವೈರಿ ಆರರ ಭರದಿ ತರಿ ನೀನೂ
ಮೂರು ಋಣಗಳು ಉಳಿಯೆಗತಿಯೇನು
ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು
ಸಾರಸಜ್ಜನ ಪ್ರಾಪ್ಯ ಶುಭಗುಣ
ಸಾರ ಕರುಣಾ ಪೂರ್ಣವಾರಿಧಿ
ಮಾರಜನಕನೇ ಋಷಭಮಹಿದಾಸ
ತೋರು ಜ್ಞಾನವ ಬಾದರಾಯಣ
ಮೀರಲಾರೆನು ವಿಷಯವಾಸನೆ
ಭಾರತೀಶನ ಒಡೆಯ ಕೃಷ್ಣನೆ
ಭಾರ ನಿನ್ನದು ಎನ್ನ ಪೊರೆವದು
ಮತ್ಸ್ಯ ವಾಮನ
ಧೀರ ಧೃವನಾ ಪೊರೆದ ವರದನೆ
ಬೀರಿ ಭಕ್ತಿ ಜ್ಞಾನ ವೈರಾಗ್ಯ 3
ಎನ್ನ ಯೋಗ್ಯತೆ ನೋಡಿ ಫಲವೇನು
ನಿನ್ನ ಘನತೆ ತೋರಿ ಪೊರೆ ನೀನು
ನಿನ್ನ ದಾಸನ ಮಾಡು ಎನ್ನನ್ನು
ಅನ್ಯಹಾದಿಯ ಕಾಣೆ ನಾ ನಿನ್ನು
ಬೆನ್ನು ಬಿದ್ದೆನು ಇನ್ನೂಮುನ್ನೂ
ಮಾಧವ ವಿಶ್ವ ತೈಜಸ
ಪ್ರಾಜ್ಞತುರಿಯ ಹಂಸ ವಿಷ್ಣುವೇ
ಜ್ಞಾನ ಭೋಧಕ ಸನತ್ಕುಮಾರನೇ
ಮೌನಿ ದತ್ತಾತ್ರೇಯ ಹಯಮುಖ
ದೀನವತ್ಸಲ ಯಜ್ಞ ಧನ್ವಂತ್ರಿ
ಶ್ರೀನಿವಾಸ ರಾಮ ಕಪಿಲನೆ
ಜ್ಞಾನ ನಿಧಿ ಮುನಿ ನಾರಾಯಣನೆ
ನೀನೆ ಅನಿರುದ್ಧಾದಿ ರೂಪನು
ಧ್ಯಾನಗೊಚರ ಶಿಂಶುಮಾರನೆ
ಸಾನುಕೂಲದಿ ನೀನೆ ವಲಿಯುತ
ಕರ್ಮ ಸಂಚಯ4
ಆದಪೊದ ಮಾತು ಏಕ್ಕಯ್ಯ
ಮಧ್ವರಾಯರ ಪ್ರೀಯ ಶೃತಿಗೇಯ
ಮೋದದಾಯಕ ಮುಂದೆ ಸಲಹೈಯ್ಯ
ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ
ತಿದ್ದಿ ಮನವನು ಕದ್ದು ಅಘವನು
ಒದ್ದು ಲಿಂಗವ ಶುದ್ಧಜ್ಞಾನದ
ಸಾಧು ಜಯಮುನಿ ವಾಯುವಂತರ
ಮಾಧವ ಶ್ರೀ ಕೃಷ್ಣವಿಠಲನೆ
ಪಾದ ಮಧುಪರ ವೃಂದ ಮಧ್ಯದಿ
ವೇದ ಸಮ್ಮತ ಗಾನ ಸುಧೆಯನು
ಶುದ್ಧಭಕ್ತಿ ಜ್ಞಾನದೊಡಗೂಡಿ
ಮೆದ್ದು ಪಾಡುತ ಕುಣಿವ ಭಾಗ್ಯವ
ಮುದ್ದು ಕೃಷ್ಣನೆ ನೀನೆ ಎನಗಿತ್ತು 5