ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ಪ ಹೇಮಗರ್ಭ ಕಾಮಾರಿ ಶಕ್ರಸುರ ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ ಕಟ್ಟಾಣಿ ತ್ರಿವಳಿ ಕೊರಳೋಳೆ ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ ಕಟ್ಟ ಕಂಕಣ ಕೈಬಳೆ ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ ಇಟ್ಟು ಶೋಭಿಸುವ ಅಷ್ಟಸಂಪನ್ನೆ 1 ಸಕಲ ಶುಭಗುಣಭರಿತಳೆ ಏಕೋದೇವಿಯೆ ವಾಕುಲಾಲಿಸಿ ನೀ ಕೇಳೆ ನೋತನೀಯನ್ನ ಮಹಲೀಲೆ ಕೊಂಡಾಡುವಂಥ ಏಕಮನವ ಕೊಡು ಶೀಲೆ ಪತಿ ಪಾದಾಬ್ಜವ ಏಕಾಂತದಿ ಪೂಜಿಪರ ಸಂಗವ ಕೊಡು ಲೋಕದ ಜನರಿಗೆ ನಾ ಕರವೊಡ್ಡದಂತೆ ನೀ ಕರುಣಿಸಿ ಕಾಯೆ ರಾಕೇಂದುವದನೆ 2 ಇಂದಿರೆ ಯೆನ್ನ ಕುಂದು ದೋಷಗಳಳಿಯೆ ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ ಕಂದನು ಮುಂದಕ್ಕೆ ಕರೆಯೆ ಸಿರಿ ವಿಜಯವಿಠ್ಠಲರೇಯ ಎಂದೆಂದಿಗೊ ಮನದಿಂದಗಲದೆ ಆ ನಂದದಿಂದಲಿ ಬಂದು ಮುಂದೆ ಕುಣಿಯುವಂತೆ ವಂದಿಸಿ ಪೇಳಮ್ಮ ಸಿಂಧುಸುತೆಯಳೆ3
--------------
ವಿಜಯದಾಸ