ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ ತಾಯಿ ತಮ್ಮ ಪ. ಚಿನ್ನದ ಸರಪಣಿಯ ಚೆಲುವ ಪೊನ್ನಮಣಿಯ ರÀನ್ನದ ನೇಣ ತುದಿಯ ರಮಣಿಯರೆಲ್ಲರರ್ಥಿಯ1 ಈ ಮೈಯಲ್ಲಿ ಮಲಗಿಪ್ಪ ಈ ಮಹಾಲಕ್ಷ್ಮಿಯ ನೋಳ್ಪ ಸನ್ಮೋದನೆನಿಪ ಶೇಷಶಯನನ ವಟತಲ್ಪ 2 ಇಂದಿರೆ ಇಷ್ಟವನೀವ ಇಂದಿರೆಗಿವನು ಧವ ಎಂದೆಂದು ಭಕ್ತರ ಕಾವ ಎಸೆÉವ ಮಂಚದ ದೇವ 3 ಬಾರಯ್ಯ ಭಕ್ತರಬಂಧು ಬಾರಯ್ಯ ಕರುಣಾಸಿಂಧು ಇಂದು ಬಾರಯ್ಯ ಮುಕುಂದನೆಂದು 4 ಕುಂಜರ ಕೂಗಲು ಬಂದೆ ಕೂಡೆ ಮಕರಿಯ ಕೊಂದೆ ಕಂಜಾಕ್ಷ ಕಾಮನ ತಂದೆ ಕಾಯೆಂದು ಪಾಡಲು ಬಂದೆ 5 ಕಾಕರ ಗಂಟಲಗಾಣ ಕಾಮಿಸದೆನ್ನಯ ಮನ ಏಕೋದೇವನೆಂಬ ಜಾಣ ಏರಿದ ಮಣಿಯ ನೇಣ 6 ಅಖಿಳ ಸುರರ ತಾತ ರುಕುಮಿಣಿ ಪ್ರಾಣನಾಥ ರೂಢಿಗತಿಯ ಪ್ರತಿ ಈತ 7 ಮಾಯದ ದೈತ್ಯರ ಕೊಂದು ಮಲಗಬೇಕೆಂದು ಬಂದು ಹಯಗ್ರೀವರಾಯ ನಿಂದು ಹರುಷವ ತಾಳ್ದನೆಂದು 8 ಮುಂದೆ ದೇವಾಂಗನೆಯರು ಮುಖಸುತ್ತ ಮುಕ್ತಿಸುರ ವೃಂದದ ಮಧ್ಯದೊಳರವಿಂದಾಕ್ಷಿ ಪೊಳವುತ್ತಿರೆ 9 ಒಪ್ಪುವ ತಾಳಗಳೊಪ್ಪೆ ಒರಗಿಪ್ಪ ದೇವನುತ 10 ಮಾನ್ಯ ಶ್ರೀ ಹಯವದನ್ನ ಮನದ ಮಧುಸೂದನ್ನ ಎನುತ ತೂಗುವ ಜನ ಎಂದೆಂದು ಭಕ್ತಮೋದನ11
--------------
ವಾದಿರಾಜ
ಕಾಯೋ ಕರುಣಿಸಿ ಎನ್ನ ರಂಗಾ | ಬೇಗನೇ ಪಾದವದೋರಿಸಿ | ನಮನಕ ಭವಬಲಿಯನು ಬಿಡಸಿ ರಂಗಾ ಪ ಶರಣೆಂದು ಸಕಲರು ಬಂದು ಪೋಗುವಾ | ನಿನ್ನ ಮಹಾದ್ವಾರದಲಿ | ಇರುತಿಹ ನಿನ್ನಯ ಭಕುತ ಬಲೆಯಲಿ | ಇರಿಸಿ ನೀ ಇಟ್ಟು ಅಚಲದಲಿ ರಂಗಾ | ಸಂಬಳನಿತ್ತಿಹ ಧನವ ನಾನೊಲ್ಲೆ | ಬೇಡುವೆ ಒಂದÀನೋ ರಂಗಾ | ಹಂಬಲ ದಣಿವಂತೆ ನಾಮ ಭಾಂಡಾರವ | ಮಾಡೆನ್ನ ಆಧೀನವ ರಂಗಾ 1 ಕರಿದಲಿಧೃತಿ ಚಿತ್ತವನಿತ್ತು ಅನುದಿನಾ | ಹರಿಪಾದ ಸದ್ಬಕ್ತಿಯಾ ರಂಗಾ | ಮೆರೆವ ಮಂಟಪದೊಳು ನಿಲಿಸೆನ್ನ | ದುರಿತವ ತಟ್ಟದಂದದಿ ಪೊರೆಯೋ ರಂಗಾ2 ಇಹಪರದಲ್ಲಿ ಏಕೋದೇವನೆಂಬ ಮುದ್ರೆಯಾ ಭಾವದ ಬಲದಿಂದಲಿ | ಮಹಿಪತಿ ಸುತ ಪ್ರಭು ಕೊರಳಿಗೆ ಹಾಕಿನ್ನು | ಸಲಹು ನೀ ಕೃಪೆಯಿಂದಾ ರಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು