ಬಂದವನಾವನೋ ನಾ ಕಾಣೆ
ಇಂದೀವರ ನೇತ್ರಾ ಸುಗಾತ್ರಾ ಪ
ಮೆಲ್ಲಡಿ ಇಡುವ ಮರೆಯಲಿ ನಿಲುವಾ
ಕಾಂತಿಯ ಚೆಲ್ಲುವ ನೋಡಲು ನಗುವಾ ಅ.ಪ
ಆಕಳ ಕರೆವಾಗ ಸಾಕೆಂದೆನುವಾ
ಆಕಳ ಬೆಣ್ಣೆಯೇ ಬೇಕೆನುತಿರುವಾ
ಏಕೆಲೊ ಮರೆಯಾಗಿ ನಿಂತಿಹೆ ಪೇಳೆನೆ
ನೀ ಕೊಡೆ ನಾ ಬಿಡೆ ಕೇಳೆಂಬಾ 1
ಮೊಸರನು ಕಡೆವಾಗ ಹಸಿವೆಂದೆನುವ
ಬಿಸಿಯನ್ನವನಿಡೆ ಹಸುವಿಗೆ ಕೊಡುವಾ
ನುಸುಳಿ ಬಂದು ಕೆನೆಮೊಸರನೆ ಮೆಲ್ಲುವ
ಕಿಸಿಕಿಸಿ ನಗುತಲಿ ಓಡುವನಾರೋ 2
ಕಣ್ಣು ಮುಚ್ಚಲು ಬೆಣ್ಣೆಯ ಕಳುವ
ಹೆಣ್ಣುಗಳೆಡೆಯಲಿ ನಗುತಲಿ ಹುದುಗುವ
ಚಿಣ್ಣನು ಮಾಂಗಿರಿರಂಗನೇ ಯೇನೋ 3