ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.ಸ್ನಾನವೇತಕೆ ಸಂಧ್ಯಾ ಜಪತಪವೇತಕೆಮೌನವೇತಕೆ ಮಾಸವ್ರತವೇತಕೆ ||ಮಾನಸದಲಿ ವಿಷ್ಣುಧ್ಯಾನವ ಮಾಡುವಜ್ಞÕನವಂತರ ಸಂಗಸುಖದೊಳಿಪ್ಪವರಿಗೆ 1ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆಗೋತ್ರಧರ್ಮದ ಪುಣ್ಯ ಫಲವೇತಕೆ ? ||ಸೂತ್ರದಿ ಜಗವ ಮೋಹಿಸುವ ಮುರಾರಿಯಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ 2ಅಂಗದಂಡನೆ ಏಕೆ ಆತ್ಮಗಾಸಿಯು ಏಕೆತಿಂಗಳ ಚಾಂದ್ರಾಯಣವೇತಕೆ ? ||ಮಂಗಳ ಮಹಿಮ ಶ್ರೀ ಪುರಂದರವಿಠಲನಹಿಂಗದರ್ಚನೆ ಮಾಡುವ ಭಕ್ತ ಜನರಿಗೆ 3
--------------
ಪುರಂದರದಾಸರು