ಯಾರೊಡನುಸುರವೆನೋ ಕಡಲಶಾಯಿ
ಬಿಡದೆ ನಿನ್ನನು ಅಡಿಗಡಿಗೆ ಕೊಂಡಾಡುವ
ಹುಡಗನ ಮೇಲಿಷ್ಟು ಕರುಣವಿಲ್ಲದರಿಂದ ಪ
ಪೊಡವಿಯೊಳಗೆ ಜನಿಸಿರುವರೊಳಗೆ ನಾನೆ
ಕಡೆ ಈಗ ಬಸುರಿನೋಳ್ ಪಡೆದ ಮಗನು ತನ್ನ
ಮಡದಿ ಮಕ್ಕಳನು ಎನ್ನೊಡನಿತ್ತು ನಾಕಕೆ
ನಡೆದನೆನಗೆ ನಡುಮರಣವ ಹೊರಸಿ 1
ಕೆಟ್ಟ ಬದುಕ ಕಾಣಲಾರೆ ಮಾಳ್ಪರೆ ಎನ್ನ
ರಟ್ಟೆ ಬಲವು ತಗ್ಗಿ ಹೋಯ್ತು ಮೊಮ್ಮಕ್ಕಳ
ಅಟ್ಟುಳಿ ಬರಿಸನ್ನವಸ್ತ್ರಾಭರಣಕೆಂದು
ಕುಟ್ಟಿ ಕೊಂಬರು ಎನಗಿದಿರಾಗಿ ಶಿವನೇ 2
ನಾನು ಎಂಬುವರಿಲ್ಲ ಗೃಹಕೃತ್ಯದೊಳಗೆನ್ನ
ಮಾನಿನಿಯೊರ್ವಳುಂಟಿದರೊಳು ಸೊಸೆಯಷ್ಟು ಏಕೆಂದ
ರೇನು ಸಂಸಾರವಿದನು ಪವಮಾನ ಸುತನ
ಕೋಣೆ ಲಕ್ಷ್ಮೀಶ ನಡೆಸು 3