ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸುರ ಬಾಧಿಸುತಿರಲು ಋಷಿಗಳು ಸ್ತುತಿ ಮಾಡೆ ದಶರಥನ ಗರ್ಭದಲಿ ಜನಿಸಿ ಬಂದೆ 1 ಶಿಶುವಾಗಿ ಕೌಸಲೆಗೆ ಬಾಲಲೀಲೆಯ ತೋರ್ದು ಕುಶಲದಿಂ ನಾಲ್ವರ ಕೂಡೆ ಬೆಳೆದೆ 2 ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ 3 ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು ಕರವ ಪಿಡಿದು 4 ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ ದಶರಥಗೆ ಏಕೀಭಾವವನೆ ತೋರಿ 5 ಪರಮ ಹರುಷದಲಿ ಸಾಕೇತನಗರಿಗೆ ಬಂದು ಕಿರಿಯ ಮಾತೆಯ ಕಠಿಣ ನುಡಿ ಕೇಳಿ 6 ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ ಭ್ರಾತೃ ಭರತನಿಗೆ ಪಾದುಕೆಯನಿತ್ತು 7 ವನದೊಳಗೆ ಸಂಚರಿಸಿ ಘನ ಕಾರ್ಯಗಳ ಮಾಡಿ ಹನುಮನ ಕಳುಹಿ ಮುದ್ರಿಕೆಯ ಕೊಡಲು 8 ಮಿತ್ರೆ ಜಾನಕಿಗರುಹಿ ರತ್ನ ಕೊಂಡು ಬರಲು ಶರಧಿ ಕಟ್ಟಿ 9 ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ ಸೃಷ್ಟಿಸುತೆ ಜಾನಕಿಯ ಅಗ್ನಿ ಹೊಗಿಸಿ 10 ಪಟ್ಟಣಕೆ ಬಂದು ಭರತನಿಗೆ ಪೇಳೆ ಅಷ್ಟಗಂಗೆ ಉದಕವನೆ ತಂದು 11 ಅಷ್ಟಋಷಿಗಳು ಎಲ್ಲ ಕೂಡಿ ಕೊಂಡು ಪಟ್ಟಾಭಿಷೇಕವನು ಮಾಡುತಿರಲಂದು 12 ಸೃಷ್ಟಿಯೊಳು ಜಗನ್ನಾಥವಿಠಲನಿಗೆ ಪುಷ್ಪ ವೃಷ್ಟಿಗಳನ್ನು ಕರೆದರಾಗ13
--------------
ಜಗನ್ನಾಥದಾಸರು