ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿಗೆ ಕಾಣದೆ ಏಕಿರುವೇ ರಂಗ ಕಣ್ಣಲಿ ನೋಡದೆ ಬಣ್ಣಿಸಲಳವೇ ಪ ಬಣ್ಣವು ಬಿಳುಪೋ | ಬೆಣ್ಣೆಯ ಕದಪೋ ಚಿಣ್ಣನೊ ತರುಣನೋ | ಹಣ್ಣುಮುದುಕನೋ ಅ.ಪ ನರನಾಗಿರುವೆಯೋ | ಹರಿಯಾಗಿರುವೆಯೋ ನರಹರಿಯೆಂಬರು | ದಿಟವೋ ಸಟೆಯೋ ಗಿರಿಯಂತಿರುವೆಯೋ | ಧರೆಯಂತಿರುವೆಯೋ ಗಿರಿಧರನೆಂಬರು ದಿಟವೋ ಸಟೆಯೋ 1 ಸ್ಮರನಂತಿಹೆಯೋ | ಗುರುವಂತಿಹೆಯೋ ಸ್ಮರಗುರುವೆಂಬರು ದಿಟವೋ ಸಟೆಯೋ ಕರಣನಾಗಿರುವೆಯೋ ಕಾರಣನಹೆಯೋ ಕರಣಕಾರಣ ನೀನೆಂಬುದು ದಿಟವೋ ಸಟೆಯೋ 2 ವೇದವಾಗಿರುವೆಯೋ ನಾದವಾಗಿರುವೆಯೋ ವೇದನಾದಗಳೊಂದೇ ಎಂಬುದು ಸಟೆಯೋ ಕಾದಿಹೆನಯ್ಯ ಮೋದವನೀಯೋ ಸಾದರದಿಂದ ಬಂದೆನ್ನನು ಕಾಯೋ 3 ಸಲಿಗೆಯ ತೋರು ಮಾಂಗಿರಿರಂಗ ಸಲೆ ನಲಿವೆನೋರಂಗ ಗರುಡತುರಂಗ ಛಲವ ಬಿಡೋ ರಂಗ ನಿಲು ನಗುತಲಿ ರಂಗ ಸಲೆ ಬಣ್ಣಿಪೆನಾ ಚೆಲುವನು ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್