ಜೋ ಜೋ ಜೋ ಜಗತ್ರಾಣ ಸುತ್ರಾಣ
ಜೋ ಜೋ ಜೋ ಶುಭವಾಣಿಯ ರಮಣ
ಜೋ ಜೋ ವೈಷ್ಣವ ಸಿದ್ಧಾಂತಿ ಶರಣ
ಮುಖ್ಯಪ್ರಾಣ ಕಲ್ಯಾಣ ಪ.
ಲೋಕಾ ಲೋಕ ಪರ್ವತಗಳ ಮ್ಯಾಲೆ
ಏಕಾಕಾರದಿ ಪಾದಗಳೂರಿ
ವ್ಯಾಕರಣಗಳ ದಿವಾಕರನಿದಿರಕಲಿ
ಸ್ವೀಕರಿಸಿದ ಕರುಣಾಕರ ಮೂರ್ತಿ
ಶ್ರೀಪತಿ ಕೃಷ್ಣನ ಸೇವಾನುಸಾರದಿ 1
ಕೋಪಾಟೋಪವ ಸಮರತಿ ತೋರಿ
ಪಾಡಿದುಶ್ಯಾಸನ ವಕ್ಷೋವಿಧಾರಿ
ದ್ರೌಪಧಿ ಕುಚಕಂಜ ಕುಟ್ಮಲಧಾ 2
ಸ್ವಾನಂದ ಪರಿಪೂರ್ಣ ಕೃಷ್ಣನ ದಾಸ
ಆನಂದತೀರ್ಥ ತೋರುವ ಮಂದಹಾಸ
ಶ್ರೀನಿಧಿ ವೆಂಕಟೇಶನ ನಂಬಿದವರ
ತಾನೆ ಬಂದೊದಗಿ ಪಾಲಿಪ ದೇವಪ್ರವರ 3