ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೋಧಿಸು ಗುರುವರನೇ ಆತ್ಮರೂಪನೇ ಬಾಧೆಯ ನೀಗುಸು ಬೋಧಾತ್ಮನೇ ಶಾಂತಿಯನೀವಾ ಭ್ರಾಂತಿಯ ಕಳೆವಾ ಏಕಾಂತಪೂರ್ಣ ನಿರಾತಂಕವಾದ ಚಿಂತೆದೂರಮಾಡುವಾ ಅಂತರಾತ್ಮಜ್ಞಾನವಾ ಸಂತೋಷದಿಂದ ತಿಳಿಸೈ ಮಹಾತ್ಮನೆ ಸದ್ಗುರುರಾಯಾ ಕರುಣಿಸು ಜೀಯಾ ಮಾಯಾ ಮಹಾಮೋಹನಿಧಿಯಾ ಜ್ಞಾನಬೋಧ ನೀಡುವಾ ಸ್ವಾನುಭಾವ ತೋರುವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ