ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಥಾ ನಮಿಪೆ ನಿನಗೇ | ಶ್ರೀ ಬದರೀನಾಥಾ ನಮಿಪೆ ನಮಿಪೆ ನಿನಗೆ ಪ ನಾಥಾ ಜಗಕೆ ಸರ್ವಾ | ನಾಥ ಜನರ ಪಾಲಭೀತಿ ರಹಿತ ಬದರಿ | ನಾಥ ವಿಚಿತ್ರ ಶಕ್ತಾ ಅ.ಪ. ಸರ್ವ ಪ್ರಾಭವ ಶಕುತೀ | ರಕ್ಷಣ ಲಯಸರ್ವ ವಿಚಿತ್ರ ಶಕುತೀ ||ಪರ್ವ ಪರ್ವಗಳಲ್ಲಿ | ಸರ್ವಾಸ್ಥಿ ಮಜ್ಜದಲಿಸರ್ವ ದೇಹದಿ ನಿಂತು | ಸರ್ವ ಕಾರ್ಯವ ಮಾಳ್ಪೇ ||ದ್ರುತ :- ಪರ್ವತ ಸುತೆ ಪ್ರಿಯ | ಶರ್ವನೊಡೆಯಪವಮಾನನಾದಿ ಸುರ | ಸರ್ವವಂದ್ಯ ಹರಿಉರ್ವಿಲಧಿಕ ಮ | ತ್ತೋರ್ವರ ಕಾಣೆನೊದುರ್ವಿಭಾವ್ಯ ಸಮ | ಸರ್ವೋತ್ತಮನೆ 1 ಏಕಮೇವನೆ ತಪವ | ಆಚರಿಸುತ್ತಲೋಕರಕ್ಷಕ ಕಾರ್ಯಮ ||ಅನೇಕಾ | ವಿಚಿತ್ರರೂಪ | ಸಾಕಾರಿ ಪ್ರಭು ನಿ-ರ್ವಿಕಾರಿಯಾಗಿ ಆ | ನೇಕಾ ಬಗೇಲಿ ಮಾಳ್ಪೆದ್ರುತ :ನಾಕ ಜಪಿತಭುವ | ನೈಕಾರಾಧ್ಯನೆಏಕ ಗುಣದಲಿ | ಏಕದೇಶ ರಮೆಲೋಕೇಶಾದಿ ಪಿ | ನಾಕಿಗಳ್ಬಲ್ಲರೆಪ್ರಾಗ್ದೇವತೆ ಹರ | ಸಾಕುವುದೆಮ್ಮ 2 ಚಿತ್ಸುಖಮಯ ವಪುಷ | ಧೇನುಕ ಮತ್ತೆವತ್ಸಾರಿ ಗೋಪ ಹರುಷ ||ವತ್ಸರದವಗುಣ | ಕುತ್ಸಿತ ಜನ ಹರಮತ್ಸ್ಯಾದಿರೂಪ ಶಿರಿ | ವತ್ಸ ಲಾಂಛನನೇ ||ದ್ರುತ :ಮತ್ಸ್ಯ ಧ್ವಜಪ ಪುರು | ಕುತ್ಸ ಭೋಜಪ ಗೋವತ್ಸ ಧ್ವನಿಗೆ ಬಹ | ಉತ್ಸಹ ಉಳ್ಳನೆಚಿತ್ಸುಖ ಪ್ರದ ಶರ | ಣ್ವೋತ್ಸಲ ಗುರು ಗೋ-ವಿಂದ ವಿಠಲ | ಮಾಂ ಪಾಹಿ ಪಾಹೀ 3
--------------
ಗುರುಗೋವಿಂದವಿಠಲರು
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ e್ಞÁನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು