ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀ ವರಾಹ ಆದಿವರಾಹ ಸಾರ ಆದರದಿ ಶರಣಾದೆ ಭೂದರ ವರಾಹನೇ ವಿಧಿ ಶ್ರಧ್ಧೇಶ ವಂದ್ಯ ಬದರಶೇಖರ ಮುಖ ಸುರವಿನುತ ವಾಂಛಿತದ ಮೋದಚಿನ್ಮಯ ಭೂವರಾಹ ಯಜÉ್ಞೀಶ ಪ ಅದ್ವಿತೀಯನು ನೀನೇ ಪದುಮಜಾಂಡದ ಒಡೆಯ ಪದುಮಭವನೊಳಿದ್ದು ಭುವನಗಳ ಸೃಜಿಸಿ ಕೃತಿ ನಡೆಸುತ್ತ ಒದಗುವಿ ಸುಖಜ್ಞಾನ ಬಲಪೂರ್ಣ ಹರಿಯೇ 1 ಅಂದು ಸ್ವಾಯಂಭುವ ಮನು ವೇನಗರ್ಭನಲಿ ಬಂದು ನಮಿಸಿ ಭಿನ್ನಹವ ಮಾಡೆ ವಿಧಿ ಹೇಳಿದ ಜನಾದರ್Àನ ಯಜ್ಞಪರಮಾತ್ಮ ಶ್ರೀದ ಭದ್ರದ ಈಜ್ಯ ಪೂಜ್ಯ ನೀನೇ ಎಂದು 2 ಸ್ವಾಯಂಭುವ ಸಾಮ್ರಾಟ್ ಪೇಳಿದ ಮಹಾ ಈ ಭೂಮಿ ಇರುವುದು ಉದ್ಧರಿಸಿ ಸ್ಥಾನವ ತನ್ ಪ್ರಜೆಗಳಿಗೆ ಒದಗಿಸಬೇಕು ಎಂದ 3 ಇರುವುದಕೆ ಸ್ಥಳ ಪ್ರಜೆಗಳಿಗೆ ಒದಗಿಸಲು ಪರಮೇಷ್ಟಿರಾಯ ತನ್ನ ಹೃದ್ ವನಜದಿ ಸುಪ್ರಕಾಶಿಪ ಪರಮ ಪೂರುಷ ನಿನ್ನನ್ನು ಪರಮಾದರದಲ್ಲಿ ಧ್ಯಾನಿಸಿದನು 4 ಮಹಿಶಿರಿಕಾಂತ ನಿನ್ನನು ಧ್ಯಾನಿಸುತಲಿದ್ದ ಬ್ರಹ್ಮನ ಮೂಗಿಂದ ಹರಿ ಅನಘ ನೀನು ವರಾಹ ಮರಿ ಅಂಗುಷ್ಟ ಮಾತ್ರ ಪ್ರಮಾಣದಿ ಬಹಿರ್ಗತನು ಆದಿಯೋ ಚಿದಾನಂದರೂಪ 5 ಒಂದೇ ಕ್ಷಣದಿ ಗಜಮಾತ್ರ ವರ್ಧಿಸಿದಿಯೋ ಅದ್ಭುತ ಈ ರೂಪ ಕಂಡು ಅಲ್ಲಿ ಇದ್ದ ಮರೀಚಿ ಪ್ರಮುಖ ವಿಪ್ರರು ಮನು ಮೊದಲಾದವರು ಬಹು ಬೆರಗಾದರಾಗ 6 ಸೂಕರ ರೂಪ ಕಂಡಿಲ್ಲ ಎಲ್ಲೂನು ಇದು ಮಹಾಶ್ಚರ್ಯ ಗಂಡ ಶಿಲಾವೋಲ್ ಕ್ಷಣ ಮಾತ್ರದಲಿ ಚಂಡ ಈ ಕ್ರೋಡವು ದೊಡ್ಡದಾಗಿಹುದು 7 ಸೂಕರ ರೂಪವ ನೋಡುತ್ತ ಮುನಿಗಳು ತರ್ಕಿಸಿ ಮೀಮಾಂಸ ಮಾಡೆ ಅನಿಮಿತ್ತಬಂಧು ಹರಿ ಒಲಿದು ಬಂದಿರುವಿ ಎಂದು ವನಜಸಂಭವ ಸಂತೋಷ ಹೊಂದಿದನು 8 ಮಹಾವರಾಹ ರೂಪನೇ ವಿಭೋ ನೀನು ಮಹಾಧ್ವನಿಯಲಿ ಗರ್ಜಿಸಿದಿ ಆಗ ಆ ಹೂಂಕಾರವು ದಿಕ್ಕು ವಿದಿಕ್ಕುಗಳ ಮಹಾಂಬರವ ತುಂಬಿತು ಪ್ರತಿಧ್ವನಿಯಿಂದ9 ಅಪ್ರತಿ ಮಹಾಮಹಿಮ ಉರುಪರಾಕ್ರಮ ನೀನು0 ಅಂಬುಧಿಯೊಳು ಲೀಲೆಯಿಂದಲಿ ಪೊಕ್ಕು ಸುಪವಿತ್ರತಮ ನಿನ್ನ ದಂಷ್ಟ್ರದ ಮೇಲಿಟ್ಟುಕೊಂಡು ಕ್ಷಿಪ್ರದಲಿ ನೀರಮೇಲ್ ತಂದಿ ಭೂಮಿಯನು 10 ನೀರೊಳಗಡೆ ತಡೆದ ಆದಿದೈತ್ಯನ ಕೊಂದು ನೀರಮೇಲ್ ಇರಿಸಿದಿ ಭೂಮಿಯ ಎತ್ತಿ ಸರಸಿಜೋದ್ಭವ ಮುಖ್ಯಸುರಮುನಿ ವೃಂದವು ಕರಮುಗಿದು ಸ್ತುತಿಸಿದರÀು ಕೃತಜ್ಞ ಭಕ್ತಿಯಲಿ 11 ಎಂದು ಜಯಷೋಷವ ಮಾಡಿ ಮುದದಿ ಸುತಪೋನಿಧಿಗಳು ಸ್ತುತಿಸಿ ನಮಿಸಿದರು ವೇದವೇದ್ಯನೇ ಸೂಕರರೂಪ ನಿನ್ನನ್ನ 12 ಅಖಿಳ ಮಂತ್ರದೇವತಾ ದ್ರವ್ಯಾಯ ಸರ್ವಕೃತವೇ ಕ್ರಿಯಾತ್ಮನೇ ವೈರಾಗ್ಯ ಭಕ್ತ್ಯಾತ್ಮಜಯಾನುಭಾವಿತ ಜ್ಞಾನಾಯ ವಿದ್ಯಾ ಗುರುವೇ ನಮೋ ನಮಃ13 ಈ ರೀತಿ ಇನ್ನೂ ಬಹುವಾಗಿ ಸ್ತುತಿಸಿದರು ಹರಿ ವರಾಹನೇ ಭೂದರ ಧರೋದ್ಧಾರ ನರಸುರರು ಶುಚಿಯಿಂ ಪಠಿಸಿ ಎಲ್ಲರೂ ಕೇಳೆ ಸುಪ್ರಸನ್ನನು ಆಗಿ ಭದ್ರÀವನು ಈವಿ 14 ಅನತೇಷ್ಟಪ್ರದ ಭೂವರಾಹ ಹಯಗ್ರೀವ ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ 15 -ಇತಿ ಪ್ರಥಮ ಅಧ್ಯಾಯ ಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಾಕ್ಷ ಸಂಹಾರ ಆದರದಿ ಶರಣಾದೆ ಭೂದರ ವರಾಹನೇ ವಿಧಿ ಶ್ರದ್ಧೇಶ ವಂದ್ಯ ಬದರಶೇಖರ ಮುಖ ಸುವಿನುತ ವಾಂಛಿತದ ಮೋದ ಚಿನ್ಮಯ ಭೂವರಾಹ ಯಜÉ್ಞೀಶ À ಜ್ಞಾನಸುಖ ಭೂಮಾದಿ ಗುಣಪೂರ್ಣ ನಿರ್ದೋಷ ಪೂರ್ಣಬಲ ಹರಿ ಯಜ್ಞಮೂರುತಿ ವರಾಹ ಹನನ ಮಾಡಿ ಆದಿದೈತ್ಯನ ನೀರಿಂದ ಕ್ಷೋಣಿಯ ನಿನ್ ದಂಷ್ಟ್ರ ಮೇಲಿಟ್ಟು ತಂದಿ 1 ಭೂಮಿ ಉದ್ಧರಿಸಲು ಮಾತ್ರವಲ್ಲದೇ ಆ ಹೇಮಾಕ್ಷ ಅಸುರನ್ನ ಸಂಹಾರ ಮಾಡೆ ನೀ ಮಹಾಕ್ರೋಡರೂಪವÀ ಪ್ರಕಟಿಸಿದಿ ವಿಭೋ ಅಪ್ರಾಕೃತ ಚಿನ್ಮಯ ವಪುಷ 2 ಏಕದಾ ಬ್ರಹ್ಮನ ಸುತರು ಸನಕಾದಿಗಳು ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೆ ತಡೆದರು ದ್ವಾರಪಾಲಕರು 3 ಜಯವಿಜಯರೆಂಬುವ ಆ ದ್ವಾರಪಾಲಕರಿಗೆ ಮಾಯೇಶ ಹರಿ ಪ್ರಿಯತರ ಮುನಿಶ್ರೇಷ್ಠರು ಈಯಲು ಶಾಪವ ಆ ವಿಷ್ಣು ಪಾರ್ಷದರು ದೈತ್ಯಜನ್ಮವ ಹೊಂದಿದರು ಪತನವಾಗಿ 4 ಪತಿ ಕಶ್ಯಪ ಮುನಿ ಅಹ್ನೀಕದಲಿ ಇರಲು ದಿತಿ ದೇವಿ ಬಂದು ಅಪತ್ಯಕಾಮದಲಿ ಸಂಧ್ಯಾಕಾಲದಿ ಇಚ್ಛಿಸಿ ನಿರ್ಬಂಧಿಸಿ ವಿಧಿ ವಿರುದ್ಧದಲಿ 5 ಸುತಪೋನಿಧಿ ಕಶ್ಯಪ ತೇಜೋಲ್ಬಣದಿ ದಿತಿದೇವಿ ಜಠರದಲಿ ವಿಷ್ಣುಪಾರ್ಶದರು ಪತಿತ ಆ ಜಯವಿಜಯರು ಪ್ರವೇಶಿಸಿದರು ಆ ಆದಿದೈತ್ಯನು ಸಹ ಮೊದಲೇ ಅಲ್ಲಿ ಹೊಕ್ಕಿದ್ದ 6 ಅಬ್ಧಿಯಿಂ ನೀ ಭೂಮಿ ಎತ್ತೆ ತಡೆದು ಹತ - ನಾದ ಆ ದೈತ್ಯನು ಅಬ್ಜದೋದ್ಭವನು ಶ್ರೀದ ನಿನ್ ಪಾರ್ಶದನು ಆವಿಷ್ಟನಾದ 7 ಆದಿ ಹೇಮಾಕ್ಷನೊಳು ವಿಷ್ಣು ದ್ವಾರಪ ವಿಜಯ ದಿತಿದೇವಿ ಅವರ ಸುತ ಹಿರಣ್ಯಾಕ್ಷನೆಂದು ಉದಿಸಿದನು ಅಣ್ಣ ಜಯ ಹಿರಣ್ಯಕಶಿಪು ಸಹ ಅತಿಪರಾಕ್ರಮಯುತನು ಲೋಕಕಂಟಕನು 8 ಗದೆ ಹಿಡಿದು ಹಿರಣ್ಯಾಕ್ಷ ದಿಗ್ವಿಜಯ ಮಾಡಿ ಭೀತಿ ಪಡಿಸಿದ ದೇವತಾ ಜನರನ್ನೆಲ್ಲ ಅತಿಬಲಯುತನಿವ ಧರೆಯ ಸೆಳಕೊಂಡು ಉದಧಿಯೊಳು ಹೊಕ್ಕನು ಆರ್ಭಟಮಾಡುತ್ತ 9 ಸುರರು ನಿನ್ನಲಿ ಮೊರೆ ಇಡಲು ವರಾಹ ಹರಿ ನೀನು ನೀರೊಳು ಲೀಲೆಯಿಂದಲಿ ಪೊಕ್ಕು ಆ ದೈತ್ಯ ಹಿರಣ್ಯಾಕ್ಷನ ಸಹ ಯುದ್ದ ಮಾಡಿದಿಯೋ 10 ಸುರವೃಂದ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಆ ದೈತ್ಯನ ಕೊಂದು ಧರೆಯನುದ್ಧರಿಸಿ ನೀ ಮೇಲೆತ್ತಿ ತಂದಿಯೋ ಉರುಪರಾಕ್ರಮ ಭಕ್ತವತ್ಸಲ ಕೃಪಾಳೋ 11 ವರಾಹ ಹರಿ ನಿನ್ನ ಕೃತಜ್ಞ ಮನದಿ ಸನ್ನಮಿಸಿ ಸ್ತುತಿಸಿದರು ಉದಾರ ವಿಕ್ರಮ ಹಿರಣ್ಯಾಕ್ಷನ್ನ ನೀನು ಕೊಂದ ನಿನ್ನಯ ಕ್ರೀಡಾ ವರ್ಣಿಸಲಶಕ್ಯ 12 ಕಮಲಾರಮಣ ಶ್ವೇತವರಾಹ ಮೂರುತಿ ನಮೋ ಶಾಮಚಾರ್ವಾಂಗ ನಮೋ ಭೂವರಾಹ ಬ್ರಹ್ಮ ಪವಮಾನರಿಂದಲಿ ಸದಾ ಪೂಜ್ಯನೇ ಸ್ವಾಮಿ ಕರುಣಾಂಬುಧಿಯೇ ಶರಣು ಮಾಂಪಾಹಿ 13 ಕೂರ್ಮ ಕ್ರೋಢ ನರಸಿಂಹ ವಾಮನ ರೇಣುಕಾದೇವಿಯ ಸುತ ರಾಮಚಂದ್ರ ಬುದ್ಧ ಕಲ್ಕಿ ವ್ಯಾಸ ಹಯಗ್ರೀವ ಆನಮಿಪೆ ಅವನೀಶ ಭೂ ಶ್ರೀಶ ಪಾಹಿ 14 ವರಾಹ ನಮೋ ಸದಾನಂದಮಯ ಜಗಜ್ಜ£್ಮÁದಿ ಕರ್ತ ನಿರ್ದೋಷ ಗುಣಪೂರ್ಣ ಅನಿಷ್ಟ ಪರಿಹರಿಸಿ ವರ್ಧಿಸುವಿ ದಯದಿ 15 ಶ್ಯಾಮ ಅರಿಶಂಖಧರ ಅಭಯ ಸದ್ವರಹಸ್ತ ಭೂಮಿಧರ ಸರ್ವವಾಂಛಿತ ಸಿದ್ಧಿದಾತ ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನೇ ಮನ್ಮನದಿ ಸರ್ವದಾ ಹೊಳೆಯೋ ಕರುಣಾಳು 16 ಗುರು ಗುರೋರ್ಗುರು ಗುರೋರ್ಗುರುವಿನ ಗುರು ಶ್ರೀ ರಾಘವೇಂದ್ರ ಗುರುರಾಜ ಲಾತವ್ಯ ಋಜುವರ್ಯ ಮಧ್ವ ವಾರಿಜಾಸನ ಸರ್ವಹೃದ್ವನಜ ಅಂತಸ್ಥ ವರಾಹ ನಮೋ ಶರಣು 17 ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸ ಅನತೇಷ್ಟಪ್ರದ ಭೂವರಾಹ ಹಯಗ್ರೀವ ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ 18 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು