ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಕರುಣನಿಧಿಯೊ ನಮ್ಮನಂತ ರೂಪನು ಎಂಥ ಕರುಣನಿಧಿಯೊ ನಮ್ಮನಂತ ರೂಪನು ಕಂತುಪಿತನು ಸಂತತ ಭಕ್ತರ ಹೃದಯದಿ ನಿಂತು ಕಾರ್ಯ ಮಾಡುತಿಹನು ಪ ಏಕದಶಿಯ ನಿಶಿಯೊಳಾನು ತೋಕರುದರಕೆ ಬೇಕಾದೀತು ನೀಡಿ ಹೊರಗೇಕ ಕಾಲಕೆ ಕಡದಿದೇಕ ಸರ್ಪಪಾವಕೆ ಶೋಕಹರಣ ಹರಿಯ ನೆನೆ ಶ್ರೀಕರನೆನಕೈಯ ಪಿಡಿದಾ 1 ಕಡಲಶಯನನನುದಿನದೊಳು ಬಿಡದೆ ಭಜಿಸುತಾ ಕಡಲ ಮಗಳ ಕರುಣವಿಲ್ಲದೆ ಬಡವನೆನಿಸುತಾ ಇಡಲು ಹೆಜ್ಜೆ ಮಡದಿಯೆನ್ನನೊಡಸಿ ನುತಿಸುತಾ ಸಡಗರ ದಿಗ್ವಿಜಯರಾಮ ನುಡಿಯವಿಡಿದ ಧ್ಯಾನತೀರ್ಥ ಮನದಿ ನಲಿವ ಹರಿಯು 2 ಕಾಲ ಕಳೆಯುತಾ ಇರಲು ಕಾಯಕೆ ವ್ಯಾಧಿ ತೊಡರಿ ಬಾಧೆಗೊಳಿಸುತಾ ಹರಿ ಪೂಜೆಗೆ ಹರಿವ ಮನವ ಕಟ್ಟುಮಾಡುತ ಹರಿಯ ಧ್ಯಾನದರಿವು ಹಾರಿ ಉರುಳುತಿರಲು ಧರೆಯ ಮೇಲೆ ಕರುಣದಿ ನರಸಿಂಹವಿಠಲ ದಣುವನಳಿದು ತನುವ ಪೊರೆದಾ 3
--------------
ನರಸಿಂಹವಿಠಲರು
ಶ್ರೀ ಹಯಗ್ರೀವ ಮಂತ್ರಸ್ತೋತ್ರ ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ ಸನ್ನುತ ಸೇವ್ಯ ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ ಕಮಲಾಸನ ಋಷಿಯು ಗಾಯತ್ರಿಛಂದಸ್ಸು ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್ ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು 1 ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ ಅಂಡ ಬಹಿರಂತರದಿ ಎಲ್ಲೂ ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ ಕಾಶಿಸುತಿಹ ತುರಗ ವದನ ಸರ್ವಜ್ಞ2 ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ 3 ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ 4 ಏಕದಶÀ ಶತÀ ಸಹಸ್ರಾನಂತ ರೂಪನೇ ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ ವ್ಯಾಂ ಕಪಿಲದತ್ತÀ ವರಾಹಹಯಗ್ರೀವ 5 ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ45ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆಪರಮಭಾಗವತೇಷ್ಟ ಚಿಂತಾಮಣಿಯೇ ಜಯ ಜಯಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪಪ್ರಣವಾಷ್ಠಾಕ್ಷರ ದಿವ್ಯ | ಆರುಅಕ್ಷರಮಂತ್ರ ಸುಪ್ರತಿಪಾದ್ಯವಿಶ್ವಾದಿ ಎಂಟು ರೂಪಚಿನ್ಮಯಕಾಯ|ಅರಿದರಧೃತಹಸ್ತಹಸ್ತವರದಅಭಯ| ಜಯ ಜಯತುಜೀಯಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |ವಾಸುದೇವನೆ ಏಕದಶ ಶತಾನಂತರೂಪನಿರ್ದೋಷಗುಣನಿಧೇ |ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮಶಿವಾದಿ ವಂದ್ಯನೇ || ಬಾರೋ 1ಪ್ರಚುರಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕಕರ್ತಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |ಚಕ್ರಧರವರ ಅಭಯಹಸ್ತನೇ ಅಜಿತಅಜಜಗದೇಕವಂದ್ಯನೆಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆಉತ್ತರಾಸುಧಾಮಉದ್ಧವಗೋಪಿಜನ ಅಕ್ರೂರ ವರದನೇಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿರಮಣನೆ ಶರಣು ಸಂತತ || ಬಾರೋ 2ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾಅಭಯವರಕರ ಘನ್ನ | ಅಮಲೇಂದು ವದನಂ ||ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |ಅನ್ನವಾಹನತಾತಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |ಘನದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||ಬಾರೋ ಬಂದಿರೋ ಶ್ರೀಶ|| 3
--------------
ಪ್ರಸನ್ನ ಶ್ರೀನಿವಾಸದಾಸರು