ನೋಡಿ ಧನ್ಯನಾದೆನಾ ಗಜಾನನಾ ಪುನೀತನಾ
ಪಾಡಿ ಭಜನೆ ಮಾಡಿ ಇಡುವೆ ಅಡಿಗಳಲ್ಲಿ ಶಿರವಾ ಪ
ಭಾರತಾರ್ಥ ಬರೆದ ದೇವ ಮಿತ್ರನಾ ಸುಪುತ್ರನಾ
ಮಾರನಾಸ್ತ್ರ ಗೆಲಿದ ನಿಟಿಲನೇತ್ರನಾ ವಿರಕ್ತನ 1
ಸಕಲ ಶಾಸ್ತ್ರ ತಿಳಿಸೋ ಏಕದಂತನೇ ಬಲವಂತನ
ಮುಕುತಿ ಮಾರ್ಗವ ತೋರೋ ವಕ್ರತುಂಡ ವಿಘ್ನದಂತನೇ 2
ಜ್ಞಾನವಿತ್ತು ನುಡಿದು ನುಡಿಸೋ ನೀನೆ ನಿಂದು ವದನದಿ
ಮನವಾ ಹನುಮೇಶವಿಠಲನೊಳು ನಿಲಿಸೋ ಬೇಗದಿ 3